ಮೂಡಲಗಿ: ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಗುರುವಾರ ರಾತ್ರಿ ನಾಪತ್ತೆಯಾಗಿರುವ ಘಟನೆ ಕಮಲದನ್ನಿಯಲ್ಲಿ ನಡೆದಿದೆ.
ಉದಯ ಪರಿಶುರಾಮ ಹಾದಿಮನಿ (17) ನಾಪತ್ತೆಯಾದ ಯುವಕ. ಮೂಡಲಗಿ ತಾಲೂಕಿನ ಕಮಲದಿನ್ನಿಯ, ಘಟಪ್ರಭಾ ನದಿಯಲ್ಲಿ ಯುವಕ ನಿನ್ನೆ ಸಂಜೆ ವೇಳೆಗೆ ಮೀನು ಹಿಡಿಯಲು ಹೋಗಿದಾಗ ಆಕಸ್ಮಿಕ ಜಾರಿ ಬಿದಿದ್ದು, ನೀರಿನ ರಭಸಕ್ಕೆ ಉದಯ ಕೊಚ್ಚಿ ಹೋಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗ ನಾಪತ್ತೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಎಸ್ ಡಿಆರ್ ಎಫ್ ತಂಡ ಶೋಧ ಕಾರ್ಯಚರಣೆಯನ್ನು ತೀವ್ರಗೊಳಿಸಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laxmi News 24×7