ಬೆಂಗಳೂರು: ರಾಜ್ಯದ ಜನರು ಮೇ.3 ಬಳಿಕ ಲಾಕ್ ಡೌನ್ ಮುಕ್ತಾಯವಾಗಲಿದೆ ಎಂದುಕೊಂಡಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿವರೊಂದಿಗೆ ನಡೆದ ವಿಡಿಯೋ ಕಾನ್ಪರೆನ್ಸ್ ನಲ್ಲಿ ಲಾಕ್ ಡೌನ್ ಮುಂದುವರೆಸಲಾಗುವುದು ಎಂಬ ಸುಳಿವು ಕೊಟ್ಟಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಲೆ ಇದೆ. ಇದರಿಂದ ಲಾಕ್ ಡೌನ್ ಮೇ.15ರವರೆಗೆ ಮುಂದುವರೆಯುವುದು ಬಹುತೇಕ ಖಚಿತವಾಗಿದೆ.
ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ನಲ್ಲಿ ತಮ್ಮ ಪ್ಲ್ಯಾನ್ ಬಗ್ಗೆ ವಿವರಿಸಿದ್ದಾರೆ. ಕೊರೊನಾ ಸೋಂಕು ಪ್ರದೇಶಗಳನ್ನು ರೆಡ್ ಜೋನ್, ಆರೇಂಜ್ ಜೋನ್, ಗ್ರೀನ್ ಜೋನ್ ವಿಂಗಡಿಸಲಾಗಿದೆ. ಇವುಗಳಲ್ಲಿ ರೆಡ್ ಜೋನ್ ಅನ್ನು ಕಂಪ್ಲಿಟ್ ಲಾಕ್ ಡೌನ್ ಮಾಡಲಾಗುತ್ತದೆ. ಆರೇಂಜ್ ಜೋನ್ , ಗ್ರೀನ್ ಜೋನ್ ಅನ್ನ ಅಲ್ಲಿ ಸ್ವಲ್ಪ ರೀಲಿಪ್ ನೀಡಿದರು ಸಹ ಕೆಲವು ನಿಯಮಗಳನ್ನು ಹೇರಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ರಾಜ್ಯದ ಮುಖ್ಯಮಂತ್ರಿ ಅವರು ಸಹ ಕೊರೊನಾ ವಿರುದ್ಧ ಹೋರಾಟಕ್ಕೆ ನಿಮ್ಮ ಅಭಿಪ್ರಾಯಕ್ಕೆ ನಾವು ಬದ್ಧರಾಗಿದ್ದೆವೆ. ಕೊರೊನಾ ಮೇ.15ರವರೆಗೆ ಮುಂದುವರೆಸಲು ತಿಳಿಸಿದ್ರೆ, ಲಾಕ್ ಡೌನ್ ಮುಂದುವರಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಎಲ್ಲ ರಾಜ್ಯದ ಸಿಎಂಗಳಿಗೆ ಧೈರ್ಯ ತುಂಬಿದ ಪ್ರಧಾನಿ: ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಭಯ ಪಡುವ ಅಗತ್ಯವಿಲ್ಲ. ನಾನು ನಿಮ್ಮೊಂದಿಗೆ ಇದ್ದೆವೆ. ಯಾವುದೇ ರಾಜ್ಯವೂ ಶ್ರೇಷ್ಠವಲ್ಲ, ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ತಡೆದಿದ್ದೆವೆ ಎಂಬ ಅಹಂ ಬೇಡಾ. ಮುಂದೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರೂ ಒಗ್ಗಟ್ಟು ದೇಶದಿಂದ ಕೊರೊನಾ ಮಾಹಾಮಾರಿ ವಿರುದ್ಧ ಹೋರಾಡಬೇಕಿದೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.