Breaking News

ಲಾಕ್ ಡೌನ್​ನಿಂದ ಕೊರೋನಾ ನಿಗ್ರಹ ಅಸಾಧ್ಯ: ಡಬ್ಲ್ಯೂಎಚ್ಒ ತಜ್ಞ ಮೈಕ್ ರಯಾನ್

Spread the love

ಆರಂಭದಲ್ಲಿ ನಿಧಾನವಾಗಿ ಹರಡುವ ಈ ವೈರಸ್ ಮೂರನೇ ಹಂತಕ್ಕೆ ಕಾಲಿಟ್ಟೊಡನೆ ಹರಡುವ ವೇಗ ಹೆಚ್ಚಿಸಿಕೊಳ್ಳುತ್ತದೆ. ಒಂದೇ ದಿನದಲ್ಲಿ ನೂರಾರು ಜನರು ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗುತ್ತದೆ.

ಲಂಡನ್(ಮಾ. 22): ಕೊರೋನಾ ವೈರಸ್ ನಿಗ್ರಹಕ್ಕೆ ದೇಶಾದ್ಯಂತ ತೀವ್ರ ಹೋರಾಟ ನಡೆದಿದೆ. ಇವತ್ತು ಸಾಂಕೇತಿಕ ಪ್ರತಿಭಟನೆಯಾಗಿ ಜನತಾ ಕರ್ಫ್ಯೂ ಆಚರಿಸಲಾಯಿತು. ಮುಂದಿನ ಹಲವು ದಿನಗಳ ಕಾಲ ದೇಶದ ವಿವಿಧೆಡೆ ಜಿಲ್ಲೆಗಳನ್ನು ಲಾಕ್ ಡೌನ್ ಅಥವಾ ಬಂದ್ ಮಾಡಲಾಗುತ್ತಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ತಜ್ಞ ಮೈಕ್ ರಯಾನ್ ಪ್ರಕಾರ, ಲಾಕ್ ಡೌನ್ ಮಾತ್ರದಿಂದ ಏನೂ ಪ್ರಯೋಜನ ಇಲ್ಲ ಎಂದಿದ್ಧಾರೆ. ಲಾಕ್ ಡೌನ್ ಕ್ರಮ ಹಿಂಪಡೆದರೆ ಸೋಂಕು ಮತ್ತೆ ಹರಡಲು ಪ್ರಾರಂಭಿಸುತ್ತದೆ. ಆದ್ದರಿಂದ ಈ ಸಮಸ್ಯೆಗೆ ಬೇರೆ ಕ್ರಮಗಳನ್ನ ಕೈಗೊಳ್ಳುವುದು ಅತ್ಯಗತ್ಯ ಎನ್ನುತಾರವರು.

ಸಮರ್ಪಕವಾದ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ, ಈ ಸಂಚಾರ ನಿರ್ಬಂಧ ಹಾಗೂ ಬಂದ್​ ಕ್ರಮಗಳನ್ನು ಹಿಂಪಡೆದ ಬಳಿಕ ಸೋಂಕು ಮತ್ತೆ ಹರಡುವ ಅಪಾಯ ಇದ್ದೇ ಇರುತ್ತದೆ” ಎಂದು ಬಿಬಿಸಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮೈಕ್ ರಯಾನ್ ಹೇಳಿದ್ಧಾರೆ.
ಚೀನಾದಿಂದ ಪ್ರಾರಂಭವಾಗಿ ಈ ವೈರಸ್ ವಿಶ್ವದ 160 ದೇಶಗಳಿಗೆ ಈಗಾಗಲೇ ಹರಡಿಹೋಗಿದೆ. ಯೂರೋಪ್ ಖಂಡದ ದೇಶಗಳಲ್ಲಿ ಹೆಚ್ಚು ಹರಡುತ್ತಿದೆ. ಅಮೆರಿಕ, ಇರಾನ್ ಮೊದಲಾದ ಕಡೆಯೂ ಕೋವಿಡ್-19 ಆರ್ಭಟ ಹೆಚ್ಚಾಗಿದೆ. ಭಾರತದಲ್ಲಿ 7 ಮಂದಿ ಪ್ರಾಣಬಿಟ್ಟಿದ್ಧಾರೆ. ಇಟಲಿ ದೇಶದಲ್ಲಂತೂ ಸಾವಿನ ಸಂಖ್ಯೆ 4 ಸಾವಿರ ದಾಟಿದೆ. ವಿಶ್ವಾದ್ಯಂತ 15 ಸಾವಿರಕ್ಕೂ ಹೆಚ್ಚು ಮಂದಿ ಅಸು ನೀಗಿದ್ದಾರೆ.

ಆರಂಭದಲ್ಲಿ ನಿಧಾನವಾಗಿ ಹರಡುವ ಈ ವೈರಸ್ ಮೂರನೇ ಹಂತಕ್ಕೆ ಕಾಲಿಟ್ಟೊಡನೆ ಹರಡುವ ವೇಗ ಹೆಚ್ಚಿಸಿಕೊಳ್ಳುತ್ತದೆ. ಒಂದೇ ದಿನದಲ್ಲಿ ನೂರಾರು ಜನರು ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗುತ್ತದೆ. ಆಗಲೂ ಸರಿಯಾದ ನಿಯಂತ್ರಣ ಕ್ರಮ ಕೈಗೊಳ್ಳಲಿಲ್ಲವೆಂದರೆ ಸಾವಿರಾರು ಜನರು ನಿತ್ಯ ಬಲಿಯಾಗಬೇಕಾಗಬಹುದು.

ಇವತ್ತು ಭಾನುವಾರ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್ ಡೌನ್ ಆಚರಿಸಲಾಯಿತು. ನೂರು ಕೋಟಿಗೂ ಹೆಚ್ಚು ಜನರು ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದರು. ಇಟಲಿಯಲ್ಲಂತೂ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಸ್ಪೇನ್ ದೇಶದಲ್ಲೂ ಆತಂಕಕಾರಿ ರೀತಿಯಲ್ಲಿ ವೈರಸ್ ಸೋಂಕು ಹಬ್ಬುತ್ತಿದೆ.


Spread the love

About Laxminews 24x7

Check Also

ವಿಮಾನ ನಿಲ್ದಾಣದಲ್ಲಿ ಸರ್ವರ್ ಸಮಸ್ಯೆ: ಪ್ರಯಾಣಿಕರ ಪರದಾಟ

Spread the love ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ -1ರಲ್ಲಿ ಶನಿವಾರ ಮಧ್ಯಾಹ್ನ ಇಂಡಿಗೋ ಏರ್‌ಲೈನ್ಸ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ