Breaking News

ಚೀನಾಗೆ ಬುದ್ದಿಕಲಿಸಲು ಭಾರತದ ಜೊತೆ ಸೇರಿ ಅಮೇರಿಕ ಮಾಸ್ಟರ್ ಪ್ಲಾನ್..!

Spread the love

ವಾಷಿಂಗ್ಟನ್, ಮೇ 16-ಕಿಲ್ಲರ್ ಕೊರೊನಾ ವೈರಸ್ ಮೂಲಕ ವಿಶ್ವವನ್ನೇ ಅಲ್ಲೋಲ-ಕಲ್ಲೋಲ ಮಾಡಿ ಅಪಾರ ಸಾವು-ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ ಎನ್ನಲಾದ ಚೀನಾಗೆ ತಕ್ಕ ಪಾಠ ಕಲಿಸಲು ಅಮೆರಿಕ ರಣತಂತ್ರ ರೂಪಿಸಿದೆ.

ಡ್ರ್ಯಾಗನ್ (ಚೀನಾ) ಸದೆಬಡಿಯಲು 18 ಪ್ರಬಲ ಅಸ್ತ್ರಗಳನ್ನು ಸಿದ್ದಗೊಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಚೀನಾದಿಂದ ಶತಕೋಟಿ ಡಾಲರ್‍ಗಳಷ್ಟು ಮೊತ್ತದ ಪಿಂಚಣಿ ನಿಧಿಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಅಲ್ಲದೇ ಕಮ್ಯೂನಿಸ್ಟ್ ದೇಶದಲ್ಲಿರುವ ಅಮೆರಿಕ ನೆರವಿನ ಇತರ ಯೋಜನೆಗಳಿಗೂ ಶೀಘ್ರ ಕೊಕ್ಕೆ ಬೀಳಲಿದ್ದು, ಡ್ರ್ಯಾಗನ್‍ಗೆ ಈಗಾಗಲೇ ಒದ್ದಾಟ ಶುರುವಾಗಿದೆ.

ಕೋವಿಡ್-19 ವೈರಸ್ ವಿಷಯದಲ್ಲಿ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿ ಜಗತ್ತಿನ ದಿಕ್ಕು ತಪ್ಪಿಸುತ್ತಿರುವ ಕಮ್ಯೂನಿಸ್ಟ್ ದೇಶದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಕೆಂಡಾಮಂಡಲವಾಗಿದ್ದಾರೆ.

ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಕ್ಷಾಂತರ ಮಂದಿ ಸಾವು ಸಂಭವಿಸಿ, ಊಹೆಗೂ ನಿಲುಕದ ಅಪಾರ ನಷ್ಟ ಸಂಭವಿಸಿದ್ದರೂ, ಚೀನಾ ವೈರಸ್ ಮೂಲ ಮತ್ತು ಅದು ಹಬ್ಬಲು ನಿಖರ ಕಾರಣದ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ನೀಡದೇ ಸುಳ್ಳು ಹೇಳುತ್ತಾ ಬಂದಿರುವುದು ಟ್ರಂಪ್ ಅವರನ್ನು ಕೆರಳಿಸಿದೆ.

ತಮ್ಮ ಮಿತ್ರ ರಾಷ್ಟ್ರಗಳು (ಇಂಗ್ಲೆಂಡ್ ಮತ್ತು ಫ್ರಾನ್ಸ್) ಹಾಗೂ ಭಾರತದೊಂದಿಗೆ ಸೇರಿ ಚೀನಾಗೆ ದೊಡ್ಡ ಮಟ್ಟದಲ್ಲಿ ತಿರುಗೇಟು ನೀಡಲು ಟ್ರಂಪ್ 18 ಅಂಶಗಳ ಮಾಸ್ಟರ್ ಪ್ಲಾನ್ ಸಿದ್ದಪಡಿಸಿದ್ದಾರೆ

ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು, ಅಲ್ಲಿನ ಅಮೆರಿಕ ಉದ್ಯಮಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವುದು, ಆ ದೇಶದೊಂದಿಗಿನ ವಾಣಿಜ್ಯ, ರಕ್ಷಣೆ, ಸಹಕಾರ ಸೇರಿದಂತೆ ಎಲ್ಲ ಸಂಬಂಧಗಳನ್ನು ಕಡಿತಗೊಳಿಸುವುದು, ಕೆಂಪು ದೇಶಕ್ಕೆ ಅಮೆರಿಕದ ವಿವಿಧ ಮೂಲಗಳಿಗೆ ಲಭಿಸುತ್ತಿರುವ ಸಾಲ ಸೌಲಭ್ಯಕ್ಕೆ ಕತ್ತರಿ ಹಾಕುವುದು, ಚೀನಾ ಹೊರತುಪಡಿಸಿ ಏಷ್ಯಾದ ಇತರ ದೇಶಗಳಲ್ಲಿ (ಭಾರತ, ಥೈಲೆಂಡ್, ಜಪಾನ್, ತೈವಾನ್ ಇತ್ಯಾದಿ) ಬಂಡವಾಳ ಹೂಡುವುದು, ಚೀನಾದ ಕಳಪೆ ಮತ್ತು ಅಪಾಯಕಾರಿ ಉತ್ಪನ್ನಗಳಿಗೆ ಕಡಿವಾಣ ಹಾಕುವುದು ಈ 18 ಅಸ್ತ್ರಗಳಲ್ಲಿ ಸೇರಿವೆ.

ಚೀನಾದಿಂದ ಅಮೆರಿಕ ಈಗಾಗಲೇ ಸಾಕಷ್ಟು ಕಂಪನಿಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದು, ಅದರೊಂದಿಗೆ ವಾಣಿಜ್ಯ ವ್ಯವಹಾರವನ್ನು ಯಾವುದೇ ಕಾರಣಕ್ಕೂ ಮುಂದುವರಿಸುವುದಿಲ್ಲ ಎಂದು ಟ್ರಂಪ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಚೀನಾ ವಿರುದ್ಧ ಲಕ್ಷಾಂತರ ಕೋಟಿ ಡಾಲರ್ ಪರಿಹಾರ ನಷ್ಟ ಹೂಡಲು ಅಮೆರಿಕ ಈಗಾಗಲೇ ಸಿದ್ದವಾಗಿದೆ. ಜೊತೆಗೆ ಚೀನಾದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲು ಸಜ್ಜಾಗುತ್ತಿದೆ. ಏಷ್ಯಾ ಖಂಡದಲ್ಲಿ ಪ್ರಬಲ ಆರ್ಥಿಕ ದೇಶವಾದ ಚೀನಾದ ಕುತಂತ್ರಕ್ಕೆ ಸರಿಯಾಗಿ ಪಾಠ ಕಲಿಸಲು ಅಮೆರಿಕ ಭಾರತದ ನೆರವು ಪಡೆಯುತ್ತಿದೆ.

ಇದೇ ಕಾರಣಕ್ಕಾಗಿ ಚೀನಾದಲ್ಲಿ ತನ್ನ ಹೂಡಿಕೆಯ ಬಹು ಪಾಲನ್ನು ಭಾರತ ಮತ್ತು ಜಪಾನ್‍ನತ್ತ ವಿನಿಯೋಗಿಸಲು ಮುಂದಾಗಿದೆ. ಅಲ್ಲದೇ ಸಹಕಾರ ನೀಡಲು ಸದಾ ಉತ್ಸುಕವಾಗಿರುವ ಥೈಲೆಂಡ್, ತೈವಾನ್, ವಿಯೆಟ್ನಾಂ ದೇಶಗಳೊಂದಿಗೆ ವಾಣಿಜ್ಯ, ರಕ್ಷಣಾ ಮತ್ತು ಇತರ ಕ್ಷೇತ್ರಗಳಲ್ಲಿ ನೆರವು ನೀಡಿ ಆ ದೇಶಗಳ ಪ್ರಗತಿಗೆ ನೆರವಾಗುವುದು ಅಮೆರಿಕದ ಉದ್ದೇಶವಾಗಿದೆ. ಅಮೆರಿಕ ಈ ರಣತಂತ್ರಕ್ಕೆ ಭಾರತವೂ ಸಾಥ್ ನೀಡಲಿದೆ.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ