ಘಟಪ್ರಭಾ: ಬಾರ್ ಅಂಗಡಿ ಮುಂಗಟ್ಟುಗಳಿಗೆ ಕಣ್ಣು ಹಾಕುತ್ತಿದ್ದ ಆರೋಪಿತರನ್ನ ಪತ್ತೆ ಹಚ್ಚಿ ಜೈಲಿಗಟ್ಟಿದ ಘಟಪ್ರಭಾ ಪೊಲೀಸರು ಕಾರ್ಯಾಚರಣೆ ನಡೆಸಿದ
ದಿನಾಂಕ. 11/05/2025 ರಂದು 3 ಜನ ಆರೋಪಿತರಿಗೆ ದಸ್ತಗೀರ ಮಾಡಿ ಅವರ ಕಡೆಯಿಂದ ಘಟಪ್ರಭಾ ಠಾಣೆಯ ಹದ್ದಿ ಹಾಗೂ ಹುಕ್ಕೇರಿ ಠಾಣೆಯ ಹದ್ದಿ ಮತ್ತು ಸಂಕೇಶ್ವರ ಠಾಣೆ ಹದ್ದಿ ಹಾಗೂ ರಾಯಭಾಗ ಠಾಣೆ ಹದ್ದಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಮೋಟಾರ ಸೈಕಲ್ ಹಾಗೂ ಹಣವನ್ನು ಜಪ್ತಿ ಮಾಡಿ ಸದರಿ ಆರೋಪಿತರನ್ನು ಪೋಲಿಸರು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ.
ಈ ಕಳ್ಳತನ ಕಾರ್ಯಾಚರಣೆಯು ಘಟಪ್ರಭಾ ಪೊಲೀಸರು
ಮಾನ್ಯ ಎಸ್‌ಪಿ ಸಾಹೇಬರು ಬೆಳಗಾವಿ ಹಾಗೂ ಹೆಚ್ಚುವರಿ ಎಸ್‌ಪಿ ಸಾಹೇಬರು ಬೆಳಗಾವಿ ಹಾಗೂ ಡಿಎಸ್‌ಪಿ ಸಾಹೇಬರು ಗೋಕಾಕ ರವರ ಮಾರ್ಗದರ್ಶನದಲ್ಲಿ ಹೆಚ್.ಡಿ. ಹೆಚ್.ಕೆ.ನರಳೆ, ಎಸ್.ಆರ್ ಕಣವಿ ಹಾಗೂ ಸಿಬ್ಬಂದಿಗಳಾದ
ಆರ್. ಆರ್. ಗಿಡ್ಡಪ್ಪಗೋಳ, ಕೆ.ಆರ್.ಬಬಲೇಶ್ವರ.ಕೆ.ಹೋಳ್ಕರ ಬಿ.ಎಂ.ತಳವಾರ, ಆರ್.ಕೆ.ಧುಮಾಳೆ, ಬಿ.ಎಸ್.ನಾಯಕ ಎಲ್.ಎಂ.ಪೂಜೇರಿ ಎಲ್.ಎಲ್.ಚಿಕ್ಕೋಡಿ ಇವರೆಲ್ಲರೂ ಸದರಿ ಪ್ರಕರಣದಲ್ಲಿ ಪಾಲ್ಗೊಂಡಿದ್ದು, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಬೆಳಗಾವಿ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.