ಬೆಂಗಳೂರು: ಚಿನ್ನ ಪಡೆದು ಹಣ ನೀಡದೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ಐಶ್ವರ್ಯ ಗೌಡಗೆ ಸೇರಿದ ಮತ್ತೊಂದು ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ಕಾರನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಹಿಂದೆ ಐಶ್ವರ್ಯ ಗೌಡ ಬಳಿ ಮೂರು ಐಷಾರಾಮಿ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ KA01MY8585 ನಂಬರಿನ ಆಡಿ, KA1MB8555 ໖໖ KA05NL3567 3 ಫಾರ್ಚುನರ್ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದರು.
ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಈ ಕಾರನ್ನು ಗಿಫ್ಟ್ ಆಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಐಶ್ಚರ್ಯ ಕೊಟ್ಟಿದ್ದರು ಎನ್ನಲಾಗಿದೆ. ಇದೀಗ ವಿನಯ್ ಕುಲಕರ್ಣಿ ಬಳಿಯಿಂದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರನ್ನು ಆರ್ ಆರ್ ನಗರ ಪೊಲೀಸ್ ಠಾಣೆ ಆವರಣದಲ್ಲಿ ತಂದು ನಿಲ್ಲಿಸಲಾಗಿದೆ.
ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದ ಐಶ್ವರ್ಯ, ನಾನು ಡಿಕೆ ಸುರೇಶ್ ತಂಗಿ ಎಂದು ವೈದ್ಯರಿಗೆ ಪರಿಚಯ ಮಾಡಿಕೊಂಡಿದ್ದಾಳೆ. ಗೊಲ್ಡ್ ಬ್ಯಸಿನೆಸ್, ಕೆಸಿನೋ, ದೊಡ್ಡಮಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಾಳೆ. ಬ್ಯುಸಿನೆಸ್ ಮೇಲೆ ಹೂಡಿಕೆ ಮಾಡಿ ಎಂದು 5 ಕೋಟಿಯಷ್ಟು ಹಣ ಪೀಕಿದ್ದಾಳೆ. 2022 ರಿಂದ ಇಲ್ಲಿವರೆಗೂ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿದ್ದಾಳೆ ಎಂದು ವೈದ್ಯರು ದೂರು ನೀಡಿದ್ದಾರೆ.