Breaking News

ಸತ್ಕಾರದಿಂದ ಹೆಚ್ಚಿನ ಜವಾಬ್ದಾರಿ ಬಂದಿದೆ: ಬಾಲದಂಡಿ

Spread the love

ಸಾವಳಗಿ:ಮಾಹಾಮಾರಿ ಕೊರಾನ ಆತಂಕದಿಂದ ಜನರಿಗೆ ಅರಿವು ಮೂಡಿಸುವ ಸಲುವಾಗಿ ಘಟಪ್ರಭಾ ಪಿ,ಎಸ್,ಐ, ಹಾಲಪ್ಪ ಬಾಲದಂಡಿಯವರ ನೇತೃತ್ವದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಸಮಯದಲ್ಲಿ ಕೊರಾನಾ ಸೈನಿಕರಿಗೆ ಹೂವು ಹಾರಿಸಿ ಮನಪೂರ್ವಕವಾಗಿ ಸ್ವಾಗತಿಸಿದರು.

 

ಮಾಹಾಮಾರಿ ರೋಗ ತಡೆಯಲಿಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇದರಿಂದ ತಡೆಗಟ್ಟಬಹುದು, ಇದರಲ್ಲಿ ಆಶಾ ಕಾರ್ಯಕರ್ತರ ಪಾತ್ರ ಬಹುಮುಖ್ಯ , ಇಲ್ಲಿಯವರಿಗೆ ಹೋಮ್ ಕ್ವಾರೆಂಟನ್ ಇದ್ದವರು ಯಾರಿಗೂ ತೊಂದರೆ ನೀಡಿಲ್ಲ, ಅದಕ್ಕಾಗಿ ನಾವು ಎಲ್ಲರಿಗೂ ಕೊರಾನಾ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವು,

ಅದರಂತೆ ಕೊರಾನಾ ಹರಡದಂತೆ ತಡೆಯಲು ಪ್ರಯತ್ನಿಸುತ್ತಿರುವ ಎಲ್ಲ ಇಲಾಖೆಗಳಿಗೆ ಸತ್ಕರಿಸಿದ್ದೂ ಮತ್ತೆ ನಮ್ಮನ್ನು ಹುಮ್ಮಸಿನಿಂದ ಕೆಲಸ ಮಾಡಲಿಕ್ಕೆ ಪ್ರೇರೆಪಿಸಿದ್ದೀರಿ, ಅದರಂತೆ ಪೋಲಿಸ್ ಇಲಾಖೆಯ ಪಾತ್ರವು ಹೆಚ್ಚಿನವಾದದ್ದು , ಅದರಂತೆ ತಮಗೆ ಯಾರಾದರೂ ಬೇರೆ ಊರಲ್ಲಿ ಸಂಬಂದಿಕರು ಇದ್ದಲ್ಲಿ ಕೊರಾನಾ ಲಾಕಡೌನ್ ಮುಗಿಯುವ ತನಕ ಅದೆ ಊರಲ್ಲಿ ಇರಲು ಹೇಳುತ್ತಾ ಎಲ್ಲ ಇಲಾಖೆಯದಂತೆ ತಮ್ಮ ಸುದ್ದಿಯ ಮೂಲಕ ಜನರಿಗೆ ಅರಿವು ಮೂಡಿಸತ್ತಿರುವ ದೃಶ್ಯ ಮತ್ತು ಪತ್ರಿಕಾ ಮಾದ್ಯಮದವರ ಕಾರ್ಯಕ್ಕೆ ಮೆಚ್ಚಬೇಕೆಂದರು.

 

ಹಾಗೂ ಗ್ರಾಮಸ್ಥರೆಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಒಂದು ಬಕೆಟ್ ಇಟ್ಟು ಹೊರಗಡೆ ಹೋಗಿ ಬಂದ ನಂತರ ಕೈ ಕಾಲು ತೊಳೆದು ಕೊಂಡು ಮನೆಯೊಳಗೆ ಹೊಗಲು ತಿಳಿಸಿದರು.ಹಾಗೂ ಯಾರೂ ಕೂಡ ಅನಾವಶ್ಯವಾಗಿ ಮಾಸ್ಕ ಹಾಕದೆ ಹೊರಗಡೆ ಬರದಂತೆ ಕುಟುಂಬದ ಮುಖ್ಯಸ್ಥರಿಗೆ ತಮ್ಮ ಮಕ್ಕಳಿಗೆ ಹೇಳಲು ವಿನಂತಿಸಿದರು.

ಅದರಂತೆ ಡಾ: ಹರೀಶ ಇವರು ಮಾತನಾಡಿ ಕೊರಾನಾದಿಂದ ಭಯ ಬೇಡ ಆದರೆ ಅದರಿಂದ ಎಲ್ಲರೂ ತಮಗೆ ಹರಡದಂತೆ ಆರೋಗ್ಯ ಇಲಾಖೆ ನೀಡಿದ ಸಲಹೆಗಳನ್ನು ಪಾಲಿಸಲು ಹೇಳಿ ತಮ್ಮ ಮನೆಯಲ್ಲರುವ ವೃದ್ದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಗ್ರಾಮಸ್ಥರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸದಸ್ಯರಾದ ಚಿದಾನಂದ ಶಿರಗಾಂವಿ, ಗ್ರಾಮ ಪಂಚಾಯತಿ ಅಬಿವೃದ್ದಿ ಅಧಿಕಾರಿ ಸರಕಾವಸ, ನಾಲ್ಕೂರ ಗ್ರಾಮ ಪಂಚಾಯತ ಸದಸ್ಯರಾದ ದರೆಪ್ಪ ಮಗದುಮ್, ಮಹೇಶ ಶಿರಟ್ಟಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತಿ ಸದಸ್ಯರು,ಸಿಬ್ಬಂದಿಗಳು ಮತ್ತು ಘಟಪ್ರಭಾ ಪೋಲಿಸ್ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ