ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ತಡೆಗಟ್ಟಲು ಭಾನುವಾರದಂದು ಕರೆ ನೀಡಿದ ಜನತಾ ಕರ್ಫ್ಯೂವನ್ನು ಎಲ್ಲರೂ ಪಾಲಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಶನಿವಾರದರಂದು ನಗರದ ಸಚಿವರ ಕಾರ್ಯಾಲಯದ ಮುಂದೆ ತಾಲೂಕಾ ಆಡಳಿತ, ಸಾರ್ವಜನಿಕ ಆಸ್ಪತ್ರೆ, ನಗರಸಭೆ, ಪೊಲೀಸ ಇಲಾಖೆ, ರೋಟರಿ ಸಂಸ್ಥೆ , ಇನ್ನರವ್ಹೀಲ ಸಂಸ್ಥೆ ಹಾಗೂ ರೋಟರಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೊರೋನ ಸೋಂಕು ಕುರಿತು ಜಾಗೃತ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು
ಕೊರೋನಾ ವೈರಸ್ ( ಸೋಂಕು) ಬಗ್ಗೆ ಜನತೆ ಭಯಪಡದೆ ಆರೋಗ್ಯ ಇಲಾಖೆ ನೀಡಿ ನಿರ್ದೇಶನಗಳನ್ನು ಪಾಲಿಸಿದರೆ ರೋಗದಿಂದ ದೂರ ವಿರಬಹುದು .ಸರಕಾರ ಈ ವೈರಸ್ ವಿರುಧ್ಧ ಸಮರೋಪಾದಿಯಲ್ಲಿ ಕಾರ್ಯ ಪ್ರವೃತವಾಗಿದ್ದು, ಜನತೆ ಸಹಕರಿಸುವಂತೆ ಕೋರಿದರು
ಜಾಥಾದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ , ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ, ಡಾ.ರವೀಂದ್ರ ಆಂಟಿನ್, ಡಾ.ಆರ್.ಎಸ್.ಬೆನಚನಮರಡಿ, ಡಿಎಸಪಿ ಡಿ.ಟಿ.ಪ್ರಭು , ಸಿ.ಪಿ.ಐ ಗೋಪಾಲ ರಾಠೋಡ, ಡಾ.ಬಿ.ಎಸ್.ಮದಬಾಂವಿ , ರೋಟರಿ ಅಧ್ಯಕ್ಷ ಸೋಮಶೇಖರ್ ಮಗದುಮ್ಮ, ಡಾ.ಉದಯ ಆಜರೆ ಸೇರಿದಂತೆ ಅನೇಕರು ಇದ್ದರು