ಮೂಡಲಗಿ:- ಕೊರೋನಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ಜೀವ ಪಣಕ್ಕಿಟ್ಟು ವಾರಿಯರ್ಸಗಳಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಸ್ಥಳೀಯ ಶ್ರೀ ಮಹಾಲಕ್ಷ್ಮೀ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ವತಿಯಿಂದ ಮೂರು ಸಾವಿರ ಗೌರವ ಧನ ನೀಡಿ ಗೌರವಿಸಲಾಯಿತು.
ಬ್ಯಾಂಕ್ ಸಭಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಾದ ಇಂದೂಮತಿ ರಾಜನಾಳ,ಮಹಾದೇವಿ ಹಣಬರ,ಸವಿತಾ ಪಾಲಬಾಂವಿ,ವಿಜಯಲಕ್ಷ್ಮೀ ರೇಳೆಕರ ಅವರನ್ನು ಸೊಸಾಯಿಟಿ ವತಿಯಿಂದ ಗೌರವ ಧನದ ಚೆಕ್ಕು ನೀಡಿ ಗೌರವಿಸಿದರು.
ಸೊಸಾಯಿಟಿ ಅಧ್ಯಕ್ಷ ಎಸ್.ಆರ್.ಖಾನಟ್ಟಿ, ಉಪಾಧ್ಯಕ್ಷ ಎಮ್.ಜಿ.ಗಾಣಿಗೇರ ನಿರ್ದೇಶಕರಾದ ಎಮ್.ಬಿ.ಈರಪ್ಪನವರ,ಪಿ.ವಾಯ್.ಮುನ್ಯಾಳ,ಎಸ್.ಟಿ.ಪಾರ್ಸಿ,ಡಾ.ಪ್ರಕಾಶ ನಿಡಗುಂದಿ,ಸಾಂವಕ್ಕ ಶಕ್ಕಿ,ಭಾರತಿ ಪಾಟೀಲ,ಶೋಭಾ ಕದಮ್, ಪ್ರಧಾನ ವ್ಯವಸ್ಥಾಪಕ ಸಿ.ಎಸ್.ಬಗನಾಳ ಸಿಬ್ಬಂದಿ ಹನುಮಂತ ದೇಸಾಯಿ,ಅರ್ಜುನ ಗಾಣಿಗೇರ ಉಪಸ್ಥಿತರಿದ್ದರು. .
Check Also
ಹೈಕಮಾಂಡ್ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ಯತ್ನಾಳ್ ಟೀಂ
Spread the loveಬೆಳಗಾವಿ, (ಡಿಸೆಂಬರ್ 17): ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯ ಮುಂದುವರಿದಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಸನಗೌಡ …