ಕೊಡಗು: ತಂದೆ ಮನೆಯಲ್ಲೇ ಕಳವು ಮಾಡಿದ್ದ ಸುಪುತ್ರನೊಬ್ಬ ಜೈಲುಪಾಲಾಗಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಗಣಪತಿ ನಗರದಲ್ಲಿ ನಡೆದಿದೆ. ತನ್ನ ತಂದೆ ತಮಿಳರ ಆರ್ಮುಗಂ ಮನೆಯಲ್ಲಿ ಕಳ್ಳತನ ಮಾಡಿದ್ದ ಮಗ ಸತ್ಯ ಜೈಲು ಸೇರಿದ್ದಾನೆ.
ಅಂದ ಹಾಗೆ, ಸತ್ಯ ತನ್ನ ತಂದೆಯ ಮನೆಯಿಂದ ಮಿಕ್ಸಿ, DVD ಪ್ಲೇಯರ್ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ಕದ್ದೊಯ್ದಿದ್ದನು. ಆರ್ಮುಗಂ ದೂರು ನೀಡಿದ ಹಿನ್ನೆಲೆಯಲ್ಲಿ ಮಗ ಸತ್ಯನನ್ನ ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಮಿಕ್ಸಿ ಹಾಗೂ DVD ಪ್ಲೇಯರ್ನ ವಶಕ್ಕೆ ಪಡೆದಿದ್ದಾರೆ.
Laxmi News 24×7