Breaking News

ವರದಕ್ಷಿಣೆಗೆ ಮತ್ತೊಂದು ಬಲಿ: ಆರು ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದ ಯುವತಿ ಗಂಡನ ಮನೆಯಲ್ಲೇ ದುರಂತ ಸಾವು!

Spread the love

ದಾವಣಗೆರೆ: ಎರಡೂವರೆ ವರ್ಷದ ಹಿಂದೆ ಕಲಬುರಗಿಯಲ್ಲಿ ಸಿವಿಲ್​ ಇಂಜಿನಿಯರ್​ ಜತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ 21 ವರ್ಷದ ಯುವತಿ ರಚಿತಾ ಇದೇ ಜೂನ್​ 8ರಂದು ನೇಣಿಗೆ ಶರಣಾಗಿದ್ದಳು. ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಜತೆ ಮದುವೆ ಆಗಿದ್ದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದ ಐಶ್ವರ್ಯ ತುಮಕೂರಿನ ಬಾಡಿಗೆ ಮನೆಯಲ್ಲಿ ಅದೇ ದಿನ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಇಬ್ಬರೂ ಬಲಿಯಾಗಿದ್ದು ವರದಕ್ಷಿಣೆ ದಾಹಕ್ಕೆ. ಈ ಸಾವಿನ ಸರಣಿ ಮುಂದುವರಿದಿದ್ದು, ಇದೀಗ 6 ತಿಂಗಳ ಹಿಂದೆ ನೂರಾರು ಕನಸುಗಳ ಬುತ್ತಿಯೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಗಂಡನ ಮನೆಯಲ್ಲೇ ದುರಂತ ಸಾವು ಕಂಡಿದ್ದಾಳೆ.

ದಾವಣಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಜಯಪ್ರಕಾಶ ಅವರ ಪತ್ನಿ ಎಸ್.ಎಂ. ರೂಪಾ (25) ಮೃತ ದುರ್ದೈವಿ. ಹೊಸ ಕುಂದವಾಡ ಮೂಲದ ರೂಪಾಗೆ ಜಯಪ್ರಕಾಶನ ಜತೆ ಆಕೆಯ ಕುಟುಂಬಸ್ಥರು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆ ವೇಳೆ ಒಂದೂವರೆ ಲಕ್ಷ ರೂಪಾಯಿ ನಗದು, 9 ತೊಲ ಚಿನ್ನಾಭರಣವನ್ನೂ ನೀಡಲಾಗಿತ್ತು.

ಆದರೆ, ನಿನ್ನೆ(ಜೂ.29) ಬೆಳಗ್ಗೆ ರೂಪಾಳ ಶವ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿತಿಯಲ್ಲಿ ಪತ್ತೆಯಾಗಿದೆ. ವರದಕ್ಷಿಣೆ ತರುವಂತೆ ಗಂಡನ ಮನೆಯಲ್ಲಿ ನಿತ್ಯ ದೈಹಿಕ ಹಾಗೂ‌ ಮಾನಸಿಕ‌ ಹಿಂಸೆ ಕೊಡಲಾಗುತ್ತಿತ್ತು. ಗಂಡನ ಚಿತ್ರಹಿಂಸೆ ತಾಳಲಾರದೇ ರೂಪಾ ಸಾವಿನ ಮನೆಯ ಕದತಟ್ಟಿದ್ದಾಳೆ ಎನ್ನಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಗಂಡ ನಾಪತ್ತೆಯಾದ್ದು, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮೃತಳ ಪಾಲಕರು ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ