ಪುಣೆ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನೀಲಂಗೆಕರ್ ಅವರು ಪುಣೆಯಲ್ಲಿ ಬುಧವಾರ ನಿಧನರಾದರು.
ಪುಣೆಯ ರೂಬಿ ಹಾಲ್ ಕ್ಲಿನಿಕ್ ನಲ್ಲಿ ಅವರು ಕೊನೆಯುಸಿರೆಳೆದರು. COVID-19 ನಿಂದ ಚೇತರಿಸಿಕೊಂಡ ನಂತರ ಅವರನ್ನು ಇತ್ತೀಚೆಗೆ ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಆದರೆ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಮೂತ್ರಪಿಂಡ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರ ಮೊಮ್ಮಗ ಬಿಜೆಪಿ ಶಾಸಕ ಸಂಭಜಿರಾವ್ ಪಾಟೀಲ್ ನೀಲಂಗೆಕರ್ ಖಚಿತಪಡಿಸಿದ್ದಾರೆ.
ದಿವಂಗತ ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಲಾತೂರ್ ಜಿಲ್ಲೆಗೆ ಸೇರಿದವರಾಗಿದ್ದು, ಅವರ ಅಂತಿಮ ವಿಧಿಗಳನ್ನು ಅಲ್ಲಿ ನೆರವೇರಿಸಲಾಗುವುದು. ಅವರು ಮಹಾರಾಷ್ಟ್ರದ ಹತ್ತನೇ ಮುಖ್ಯಮಂತ್ರಿಯಾಗಿದ್ದರು ಮತ್ತು ಜೂನ್ 1985 ಮತ್ತು ಮಾರ್ಚ್ 1986 ರ ನಡುವೆ ಅಧಿಕಾರ ವಹಿಸಿಕೊಂಡಿದ್ದರು.