ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ಹಾಗೂ ಹಾಲಿವುಡ್ ಮಟ್ಟದಲ್ಲೂ ಮಿಂಚುತ್ತಿರುವ ನಟ ಧನುಷ್ ಮೇಲಿಂದ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಲೇ ಸಾಗಿದ್ದಾರೆ.
ಸದ್ಯದ ಮಟ್ಟಿಗೆ ಬಹಳ ಬ್ಯುಸಿಯಾಗಿರುವ ಧನುಷ್ ಅವರು ಶೇಖರ್ ಕಮ್ಮುಲಾ ಜೊತೆಗೆ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಸಂಭಾವನೆ ರೂಪದಲ್ಲಿ 50 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಲೇಟೆಸ್ಟ್ ವರದಿಯೊಂದು ತಿಳಿಸಿದೆ. ಚಿತ್ರವೊಂದಕ್ಕೆ ಧನುಷ್ ಪಡೆಯುತ್ತಿರುವ ಅತ್ಯಂತ ಹೆಚ್ಚಿನ ಸಂಭಾವನೆ ಇದಾಗಿದ್ದು, ಈ ಮೂಲಕ ತಮಿಳು ಚಿತ್ರರಂಗದ ಟಾಪ್-5 ನಟರ ಸಾಲಿಗೆ ಸೇರಿಕೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಇಬ್ಬರು ಕಲಾವಿದರು ನಿರ್ಮಿಸುತ್ತಿರುವ ಈ ಚಿತ್ರವನ್ನು ಏಕಕಾಲದಲ್ಲಿ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.