ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಮೂವರು ಪೊಲೀಸರು, ಇಬ್ಬರು ಕೌನ್ಸಿಲರ್, ಇಬ್ಬರು ನಾಗರಿಕರ ಸಾವಿಗೆ ಕಾರಣರಾಗಿದ್ದ ಲಷ್ಕರ್ ಉಗ್ರ ಮುದಸೀರ್ ಪಂಡಿತ್ ಸೇರಿದಂತೆ ಮೂವರು ಉಗ್ರರನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯ್ಯಲಾಗಿದೆ.
ಸೋಪೋರ್ ಜಿಲ್ಲೆಯ ಗುಂಡ್ ಬ್ರಾತ್ ಪ್ರದೇಶದಲ್ಲಿ ನಡೆದ ಮ್ಯಾರಥಾನ್ ಎನ್ ಕೌಂಟರ್ ನಲ್ಲಿ ಲಷ್ಕರ್ ಉಗ್ರ ಮುದಸಿರ್ ಹಾಗೂ ಪಾಕಿಸ್ತಾನ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಸೇರಿದಂತೆ ಮೂವರನ್ನು ಸದೆಬಡೆಯಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
 Laxmi News 24×7
Laxmi News 24×7
				 
		 
						
					