ಮುಂಬಯಿ: ಭಾರತೀಯ ಜನತಾ ಪಕ್ಷದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ 2024ರ ಚುನಾವಣೆಯ ಪೂರ್ವಸಿದ್ಧತೆಗಾಗಿ ಎರಡು ವಾರಗಳ ಅವಧಿಯಲ್ಲಿ ಚುನಾವಣಾ ನೀತಿ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಎನ್ ಸಿಪಿ ಮುಖಂಡ ಎರಡನೇ ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮುಂಬಯಿಯ ಶರದ್ ಪವಾರ್ ನಿವಾಸದಲ್ಲಿ ಜೂನ್ 11ರಂದು ಕಿಶೋರ್ ಜತೆ ಚರ್ಚೆ ನಡೆಸಿದ ನಂತರ ಇದೀಗ ದೆಹಲಿಯಲ್ಲಿ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ. ಸೋಮವಾರ(ಜೂನ್ 21) ಅರ್ಧ ಗಂಟೆಗಳ ಕಾಲ ಶರದ್ ಪವಾರ್ ಮತ್ತು ಪ್ರಶಾಂತ್ ಕಿಶೋರ್ ಮಾತುಕತೆ ನಡೆಸಿರುವುದಾಗಿ ವರದಿ ವಿವರಿಸಿದೆ.
2024ರ ಸಾರ್ವತ್ರಿಕ ಚುನಾವಣೆಯೇ ಪ್ರಮುಖ ಅಜೆಂಡವಾಗಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ಸೇರಿದಂತೆ ತೃತೀಯ ರಂಗದ ಅಭ್ಯರ್ಥಿ ಕುರಿತಂತೆ ರಣತಂತ್ರ ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ. ಪ್ರಧಾನಿ ಮೋದಿ ಅವರನ್ನು ಎದುರಿಸಲು ವಿಪಕ್ಷ ನಾಯಕನಿಗಾಗಿ ಈ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಮುಂಬರುವ ಚುನಾವಣೆಯಲ್ಲಿ ತೃತೀಯ ರಂಗದ ಜತೆ ಕೈಜೋಡಿಸಲು ಈಗಾಗಲೇ ಹಲವು ಪಕ್ಷಗಳು ಇಚ್ಛೆಯನ್ನು ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆಯಿಂದ ಈ ಬಾರಿ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮೂರನೇ ಬಾರಿಗೆ ಪ್ರಚಂಡ ಜಯಭೇರಿ ಸಾಧಿಸಿತ್ತು.
Laxmi News 24×7