Breaking News

ಸೋಂಕಿತರ ಸಂಖ್ಯೆ ಇಳಿಕೆ: ಸಾವಿರ ಬೆಡ್​ಗಳ ಜಿಂದಾಲ್ ಕೋವಿಡ್ ಆಸ್ಪತ್ರೆ ಸೇವೆ ಸ್ಥಗಿತ

Spread the love

ಬಳ್ಳಾರಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಮೈದಾನದಲ್ಲಿ ಆರಂಭಿಸಲಾಗಿದ್ದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಸೇವೆ ಸ್ಥಗಿತಗೊಳಿಸಲಾಗಿದೆ.

ಕೊರೊನಾ ಎರಡನೇ ಅಲೆ ವ್ಯಾಪಕವಾಗಿದ್ದ ಹಿನ್ನೆಲೆ ಸಾವಿರ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಯುಳ್ಳ ಈ ತಾತ್ಕಾಲಿಕ ಕೋವಿಡ್​​ ಕೇರ್​ ಸೆಂಟರ್​ ಸ್ಥಾಪನೆ ಮಾಡಲಾಗಿತ್ತು. ಈಗ ರೋಗಿಗಳು ಇಲ್ಲದೆ ಬೆಡ್ ಖಾಲಿಯಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲಾಡಾಳಿತ ಆಸ್ಪತ್ರೆ ಸೇವೆಯನ್ನ ಸ್ಥಗಿತಗೊಳಿಸಿದೆ. ಈ ಕುರಿತು ನ್ಯೂಸ್​ಫಸ್ಟ್‌ಗೆ ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

 

 

ಜರ್ಮನ ಟೆಂಟ್ ಮಾದರಿಯ ಈ ಆಸ್ಪತ್ರೆಯ ಕಳೆದ ತಿಂಗಳವಷ್ಟೇ ಕಾರ್ಯಾರಂಭ ಮಾಡಿತ್ತು. ಈಗ ಈಆಕ್ಸಿಜನ್ ಬೆಡ್‌ಗಳ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ವೈದ್ಯರನ್ನ ಜಿಲ್ಲೆಯ ವಿವಿಧ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗಿದೆ. ವೈದ್ಯರ ವರ್ಗಾವಣೆ ಆದೇಶ ಪ್ರತಿ ನ್ಯೂಸ್​​ಫಸ್ಟ್​​​ಗೆ ಲಭ್ಯವಾಗಿದೆ. ಅಂದ್ಹಾಗೆ ಜಿಂದಾಲ್ ಆಸ್ಪತ್ರೆಯಲ್ಲಿ ಇದುವರಿಗೂ 210 ರೋಗಿಗಳು ಗುಣಮುಖರಾಗಿದ್ದಾರೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ