Breaking News

ಯುವಕನನ್ನು ಕಾಲಿನಿಂದ ಒದ್ದು, ಅವಾಚ್ಯ ಪದಗಳಿಂದ ನಿಂದಿಸಿದ ಎಎಸ್‍ಐ ಸಸ್ಪೆಂಡ್

Spread the love

ಚಾಮರಾಜನಗರ: ಲಾಕ್‍ಡೌನ್ ವೇಳೆ ಮಾತ್ರೆ ಖರೀದಿಸಲು ಬಂದಿದ್ದ ಯುವಕನಿಗೆ ದರ್ಪ ತೋರಿ ಕಾಲಿನಿಂದ ಒದ್ದು ನಿಂದಿಸಿದ್ದ ಎಎಸ್‍ಐ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮೇ 23 ರಂದು ಯುವಕನೋರ್ವ ಮಾತ್ರೆ ಖರೀದಿಸಲು ಬೈಕ್‍ನಲ್ಲಿ ನಗರಕ್ಕೆ ಬಂದಿದ್ದ. ಈ ವೇಳೆ ಕೊಳ್ಳೇಗಾಲ ಪಟ್ಟಣ ಠಾಣೆಯ ಎಎಸ್‍ಐ ರಾಮಸ್ವಾಮಿ, ಯುವಕನಿಗೆ ದರ್ಪ ತೋರಿ ಕಾಲಿಂದ ಒದ್ದು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಯುವಕನಿಗೆ ನಿಂದಿಸಿ, ಒದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯ ಬಳಿಕ ಎಎಸ್‍ಐ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಚಾಮರಾಜನಗರ ಎಸ್ಪಿ ದಿವ್ಯ ಸಾರಾ ಥಾಮಸ್, ಘಟನೆಯ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಯುವಕನಿಗೆ ಕಾಲಿನಿಂದ ಒದ್ದು ಅಶಿಸ್ತು ತೋರಿದ ಎಎಸ್‍ಐ ರಾಮಸ್ವಾಮಿ ವಿರುದ್ಧ ಕ್ರಮ ಕೈಗೊಂಡಿದ್ದು, ರಾಮಸ್ವಾಮಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ