ಬೆಳಗಾವಿ: ಯುವಕನೊಬ್ಬ ಗೂಡ್ಸ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನಗೋಳ ರೈಲ್ವೆ ಗೇಟ್ ಬಳಿ ಗುರುವಾರ ಸಂಜೆ ನಡೆದಿದೆ.
ಕಣಬರ್ಗಿ ಗ್ರಾಮದ ಶರತ್ ಕಾಟೇ (27) ಆತ್ಮಹತ್ಯೆ ಮಾಡಿಕೊಂಡ ಯುವಕ.
ಸಿಎ ಆಗುವ ಕನಸು ಕಂಡಿದ್ದ ಈತ, ಕಳೆದ 1 ವರ್ಷದಿಂದ ಪ್ರೀತಿಯ ಬಲೆಗೆ ಬಿದ್ದಿದ್ದನು. ಹೀಗಾಗಿ ಅವರಿಬ್ಬರ ನಡುವಿನ ಪ್ರೇಮ ವೈಫಲ್ಯವೇ ಅವನ ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಸ್ಥಳಕ್ಕೆ ರೇಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ