ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾಗಳಲ್ಲಿ ನಟಿಸದಿದ್ದರೂ ಬಾಲಿವುಡ್‌ನ ಯುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಸುಹಾನಾಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಜನಪ್ರಿಯರಾಗಿದ್ದಾರೆ ಸುಹಾನಾ. ಇವರ ಒಂದೊಂದು ಪೋಸ್ಟ್‌ಗಳು ಲಕ್ಷಾಂತರ ವೀವ್ಸ್ ಪಡೆಯುತ್ತವೆ. ಗ್ಲಾಮರಸ್ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ಸುಹಾನಾ ಚಿತ್ರಗಳು ವೈರಲ್ ಆಗುವುದು ಸಾಮಾನ್ಯ.
ಅಮೆರಿಕದಲ್ಲಿ ನೆಲೆಸಿರುವ ಸುಹಾನಾ ಇತ್ತೀಚೆಗಷ್ಟೆ ತಮ್ಮ ಗೆಳತಿಯರೊಂದಿಗೆ ಪಾರ್ಟಿ ಮಾಡಿದ್ದು ಆ ಚಿತ್ರಗಳು ಸಖತ್ ವೈರಲ್ ಆಗಿವೆ. ಪೂಲ್ ಪಾರ್ಟಿ ಮಾಡಿರುವ ಸುಹಾನಾ ಮತ್ತು ಗ್ಯಾಂಗ್ ತುಂಡುಡುಗೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸುಹಾನಾ ಗೆಳತಿಯರಾದ ಅಲಾನಾ, ಪ್ರಿಯಾಂಕಾ ಕೇಡಿಯಾ ಸೇರಿ ಇನ್ನೂ ಹಲವರು ಬಿಕಿನಿ ಧರಿಸಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಹಾಟ್ ಚಿತ್ರಗಳನ್ನು ಸುಹಾನಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿಲ್ಲ ಆದರೆ ಸುಸಹಾನಾ ಗೆಳತಿ ಅಲಾನಾ ಹಾಗೂ ಪ್ರಿಯಾಂಕಾ ಹಂಚಿಕೊಂಡಿದ್ದಾರೆ.
ಸುಹಾನಾ ಸದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿನ ಟಿಶ್ಶೆ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಸಿನಿಮಾ ತಂತ್ರಜ್ಞಾನ ಮತ್ತು ನಟನೆ ಕಲಿಯುತ್ತಿದ್ದಾರೆ. ಅಮೆರಿಕದಲ್ಲಿ ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಸುಹಾನಾ, 2018 ರಲ್ಲಿ ಶೇಕ್ಸ್‌ಪಿಯರ್ ರಚಿತ ‘ರೋಮಿಯೊ ಜೂಲಿಯೆಟ್’ ನಾಟಕದಲ್ಲಿ ನಟಿಸಿದ್ದರು.
Laxmi News 24×7