Breaking News

ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ; ಬಾಲಕಿ ರಕ್ಷಣೆ

Spread the love

ಬಾಗಲಕೋಟೆ: ಕೊರೊನಾ ಲಾಕ್ ಡೌನ್ ನಡುವೆ ಗ್ರಾಮಗಳಲ್ಲಿ ಮತ್ತೆ ಬಾಲ್ಯವಿವಾಹ ಪದ್ಧತಿಗಳು ಹೆಚ್ಚುತ್ತಿವೆ. ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ ಮಾಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

 

ಗ್ರಾಮದಲ್ಲಿ ಬಾಲ್ಯವಿವಾಹ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾಮಾರಿಸಿದ ಪೋಷಕರು ನಮ್ಮ ಮನೆಯಲ್ಲಿ ಸಾವಾಗಿದೆ. ನಾವೇಕೆ ಈಗ ವಿವಾಹ ಮಾಡಿಸಲಿ ಎಂದು ಹೇಳಿದ್ದರು. ಪೋಷಕರ ಮಾತು ನಂಬಿ ಅಧಿಕಾರಿಗಳು ವಾಪಸ್ ಆಗಿದ್ದರು. ಅಧಿಕಾರಿಗಳು ಮರಳುತ್ತಿದ್ದಂತೆ ಬಾಲಕಿಗೆ ಮದುವೆ ಮಾಡಿ ಬೇರೊಂದು ಮನೆಯಲ್ಲಿ ಬಚ್ಚಿಟ್ಟಿದ್ದರು.

 

ವಿಷಯ ತಿಳಿದ ಅಧಿಕಾರಿಗಳು ಮತ್ತೆ ಗ್ರಾಮಕ್ಕೆ ತೆರಳಿದ್ದಾರೆ. ಬಾಲಕಿಯ ಮೊಬೈಲ್ ಲೊಕೇಷನ್ ಆಧರಿಸಿ ಬಾಲಕಿ ಪತ್ತೆಹಚ್ಚಿ ರಕ್ಷಿಸಿದ್ದಾರೆ. ಸದ್ಯ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ