ಮುಂಬೈ : ತಮ್ಮ ಹಾಡಿನ ಮೂಲಕ ಹಲವಾರು ಮಂದಿಯ ಮನಸ್ಸಿನ್ನು ಗೆದ್ದಿರುವ ಹಾಗೂ ಸಂಗೀತ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ಗಾಯಕಿ ಶ್ರೇಯಾ ಘೋಷಾಲ್ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.
ಈ ಕುರಿತು ಶ್ರೇಯ ಗೋಶಲ್ ಅವರ ಪತಿ ಶೀಲಾದಿತ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗಂಡು ಮಗುವಿಗೆ ಶ್ರೇಯ ಗೋಶಲ್ ನೀಡಿರುವುದಾಗಿ ತಿಳಿಸಿದ್ದಾರೆ. ಮಾರ್ಚ್ ನಲ್ಲಿ ತಮ್ಮ ಮಗುವಿನ ಆಗಮನದ ಬಗ್ಗೆ ಶ್ರೇಯಾ ಖುಷಿ ಹಂಚಿಕೊಂಡಿದ್ದರು .