Breaking News

ಬೆಂಗಳೂರಿನಲ್ಲಿ ರೆಮ್‌ಡೆಸಿವಿರ್‌ ನ ಖಾಲಿ ಬಾಟಲಿಯಲ್ಲಿ ಗ್ಲುಕೋಸ್ ತುಂಬಿಸಿ ಮಾರಾಟ ಮಾಡುತ್ತಿದ್ದ ಓರ್ವ ವೈದ್ಯ ಸಹಿತ ವಾರ್ಡ್‍ಬಾಯ್ ಬಂಧನ

Spread the love

ಬೆಂಗಳೂರು – ನಗರದಲ್ಲಿ ನಕಲಿ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಮಾರಾಟ ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯ. ಡಾ.ಸಾಗರ ಮತ್ತು ವಾರ್ಡ್‍ಬಾಯ್ ಕೃಷ್ಣ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ‘ರೋಹಿತ್’ ಎಂಬ ಹೆಸರಿನಲ್ಲಿ ಸರಕಾರದಿಂದ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ತರಿಸುತ್ತಿದ್ದರು ಮತ್ತು ಅವುಗಳಲ್ಲಿ ಅರ್ಧವನ್ನು ರೋಗಿಗಳಿಗಾಗಿ ಬಳಸಲಾಗುತ್ತಿತ್ತು ಮತ್ತು ಉಳಿದವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.

ಅಷ್ಟೇ ಅಲ್ಲ, ಅವರು ಖಾಲಿ ರೆಮ್‌ಡೆಸಿವಿರ್‌ ಬಾಟಲಿಗಳಲ್ಲಿ ಗ್ಲೂಕೋಸ್ ಅನ್ನು ತುಂಬಿಸಿ ೨೦,೦೦೦ ರೂಪಾಯಿಗೂ ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿಂದೆ ರೆಮ್ಡೆಸಿವಿರ್ ಅನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಮುನಿರಾಜ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ವಾರ್ಡ್‍ಬಾಯ್ ಕೃಷ್ಣನ ಹೆಸರನ್ನು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಆ ನಂತರ ಕೃಷ್ಣನನ್ನು ವಿಚಾರಣೆಗೊಳಪಡಿಸಿದಾಗ ಇದರಲ್ಲಿ ಮುಖ್ಯ ವೈದ್ಯ ಡಾ.ಸಾಗರ ಇವರ ಹೆಸರು ಬಹಿರಂಗವಾಗಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ