Breaking News

ಭಾರತದಲ್ಲಿ ತಗ್ಗಿದ್ದ ಕೊರೋನಾ ಅಬ್ಬರ : 24 ಗಂಟೆಯಲ್ಲಿ 2.81 ಲಕ್ಷ ಹೊಸ ಕೇಸ್, 4106 ಸಾವು..!

Spread the love

ನವದೆಹಲಿ,ಮೇ.17-ಅಂತೂ ಇಂತೂ ಕೊರೊನಾ ಸೋಂಕು ಭಾರಿ ಇಳಿಮುಖದತ್ತ ಮುಖ ಮಾಡಿದೆ. ಒಂದೇ ದಿನದಲ್ಲಿ ನಾಲ್ಕು ಲಕ್ಷ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಇದೀಗ 2.81 ಲಕ್ಷಕ್ಕೆ ಇಳಿದಿದೆ. ನಿನ್ನೆಯಿಂದ 2,81,386 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದು, ಇದು ಕಳೆದ 27 ದಿನಗಳಲ್ಲಿ ದಾಖಾಲಾದ ಅತ್ಯಂತ ಕಡಿಮೆ ಪ್ರಮಾಣ ಎಂದು ಗುರುತಿಸಲಾಗಿದೆ.2,81 ಲಕ್ಷ ಮಂದಿ ಹೊಸ ಸೋಂಕಿತರಿಂದಾಗಿ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,49 ಕೋಟಿ ಗಡಿ ದಾಟಿದೆ.ಸೋಂಕು ಕಡಿಮೆಯಾದರೂ ಸಾವಿನ ಪ್ರಮಾಣದಲ್ಲಿಇಳಿಕೆಯಾಗಿಲ್ಲ. ಕಳೆದ 24 ಗಂಟೆಗಳಲ್ಲಿ 4106 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 2,74,390 ರಷ್ಟಾಗಿದೆ.

 

2,81 ಲಕ್ಷ ಮಂದಿ ಹೊಸ ಸೋಂಕಿತರಿಂದಾಗಿ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,49 ಕೋಟಿ ಗಡಿ ದಾಟಿದೆ.ಸೋಂಕು ಕಡಿಮೆಯಾದರೂ ಸಾವಿನ ಪ್ರಮಾಣದಲ್ಲಿಇಳಿಕೆಯಾಗಿಲ್ಲ. ಕಳೆದ 24 ಗಂಟೆಗಳಲ್ಲಿ 4106 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 2,74,390 ರಷ್ಟಾಗಿದೆ.

ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.84.81ಕ್ಕೆ ಏರಿಕೆಯಾಗಿರುವುದರಿಂದ ದೇಶದ ಸಕ್ರಿಯ ಸೋಂಕಿತರ ಪ್ರಮಾಣ 35,16,997ಕ್ಕೆ ಸಿಮೀತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖವಾಗಿದೆ. 2,49 ಕೋಟಿ ಸೋಂಕಿತರ ಪೈಕಿ ಈಗಾಗಲೇ 2,11ಕೋಟಿ ಮಂದಿ ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ.


Spread the love

About Laxminews 24x7

Check Also

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

Spread the loveಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ