ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಇದೀಗ ಶಿಕ್ಷಕರಾಗಿದ್ದ ಅಣ್ಣ-ತಮ್ಮ ಇಬ್ಬರೂ ಮಹಾಮಾರಿಗೆ ಬಲಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ತೋಪಿನಕಟ್ಟಿ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದ ಸಹೋದರರಿಬ್ಬರೂ 4 ದಿನಗಳ ಅಂತರದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ.
ಅಣ್ಣ ಪಿ.ಕೆ.ಕುಂಬಾರ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದರ ಬೆನ್ನಲ್ಲೆ ತಮ್ಮ ನಾರಾಯಣ ಕುಂಬಾರ್ ಗೂ ಸೋಂಕು ಹರಡಿತ್ತು. ಇಬ್ಬರಿಗೂ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ದಿನಗಳ ಹಿಂದೆ ಅಣ್ಣ ಪಿ.ಕೆ.ಕುಂಬಾರ್ ಮೃತಪಟ್ಟಿದ್ದರೆ ಇದೀಗ ತಮ್ಮ ನಾರಾಯಣ ಕುಂಬಾರ್ ಕೂಡ ಬಲಿಯಾಗಿದ್ದಾರೆ.
Laxmi News 24×7