Breaking News

ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

Spread the love

ಬೆಂಗಳೂರು, ಮೇ 13; ಕೋವಿಡ್ ಪಿಡುಗು ತೀವ್ರವಾಗಿದ್ದು, ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಗುರುವಾರ ಪತ್ರಿಕಾ ಪ್ರಕಟಣೆ ಮೂಲಕ ಅವರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಗೆ ಈ ಕುರಿತು ಮನವಿ ಮಾಡಿದ್ದಾರೆ. ಮೇ 15ರಂದು ಡಿ. ಕೆ. ಶಿವಕುಮಾರ್ 59ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.

 

‘ನಾನು ಆ ದಿನ ಊರಲ್ಲಿ ಇರುವುದಿಲ್ಲ. ಹೀಗಾಗಿ ಯಾರೂ ಕೂಡ ಶುಭಾಶಯ ಕೋರಲು ನಿವಾಸದ ಬಳಿ ಬರುವುದು ಬೇಡ. ಮಾಧ್ಯಮಗಳಲ್ಲಿ ನನಗೆ ಶುಭಾಶಯ ಕೋರಿ ಯಾರೊಬ್ಬರೂ ಜಾಹೀರಾತು ನೀಡಬಾರದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

 

‘ರಾಜ್ಯ ತೀವ್ರ ಸಂಕಷ್ಟ ಸಮಯ ಎದುರಿಸುತ್ತಿದೆ. ಕೊರೊನಾ ರುದ್ರತಾಂಡವ ಆಡುತ್ತಿದೆ. ಈ ಸಮಯದಲ್ಲಿ ಸಂಭ್ರಮಾಚರಣೆ ವಿಹಿತವಲ್ಲ. ಹೀಗಾಗಿ ಈ ಬಾರಿ ನಾನೂ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ನೀವೂ ಸಹ ನನ್ನ ಜನ್ಮದಿನ ಆಚರಿಸುವುದಾಗಲಿ, ಶುಭಾಶಯ ಕೋರುವುದಾಗಲಿ, ಶುಭಾಶಯ ಕೋರಲು ದೂರವಾಣಿ ಕರೆ ಮಾಡುವುದಾಗಲಿ ಬೇಡ’ ಎಂದು ಸೂಚಿಸಿದ್ದಾರೆ.

 

‘ಪರಿಸ್ಥಿತಿಯ ಗಂಭೀರತೆ ಅರಿತು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯಾರು ಕೂಡ ಈ ವಿಚಾರದಲ್ಲಿ ತಪ್ಪು ಭಾವಿಸಬಾರದು. ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.


Spread the love

About Laxminews 24x7

Check Also

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್

Spread the love ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ