Breaking News

ಸಚಿವನಾದ ನನಗೇ ಹೀಗಾದ್ರೆ ಜನಸಾಮಾನ್ಯರ ಪಾಡೇನು..? :ಎಂಟಿಬಿ ನಾಗರಾಜ್ ಪ್ರಶ್ನೆ

Spread the love

ನಿನ್ನೆ ನಡೆದ ಸಂಪುಟ ಸಭೆಯಯಲ್ಲಿ ಸಚಿವ ಎಂಟಿಬಿ ನಾಗರಾಜ್​ ಆರೋಗ್ಯ ಸಚಿವ ಸುಧಾಕರ್ ಕಾರ್ಯ ವೈಫಲ್ಯತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಬೆಡ್ ಕೊಡಿಸಿ,ಆಸ್ಪತ್ರೆ ಸಿಗ್ತಿಲ್ಲ ಅಂತ ನನ್ನ ಕ್ಷೇತ್ರದಲ್ಲಿ ದಿನವೂ ಹಲವು ಕರೆಗಳು ಬರ್ತಿವೆ. ನಮ್ಮ ಸಂಬಂಧಿಕರಿಗೆ ಹಾಸಿಗೆ ಸಿಗದೇ ಪರದಾಡಿದ್ರು.

ನಾನೇ ಖುದ್ದು ಆರೋಗ್ಯ ಸಚಿವರಿಗೆ ಮೂರು ಭಾರಿ ಕರೆ ಮಾಡಿದೆ. ಒಂದೇ ಒಂದು ಬೆಡ್ ಅಡ್ಜಸ್ಟ್ ಮಾಡೋಕೆ ಆಗಲಿಲ್ಲ. ಸಚಿವನಾದ ನನಗೇ ಹೀಗಾದ್ರೆ ಜನಸಾಮಾನ್ಯರ ಪಾಡೇನು..? ಎಂದು ಎಲ್ಲರೆದುರು ಪ್ರಶ್ನಿಸಿದ್ದಾರೆ. ಇನ್ನು ಸಚಿವರ, ಶಾಸಕರ, ಟಿಎಡಿಎ ಎಲ್ಲಾ ವೇತನ ಕಟ್ ಮಾಡಿ. ಗೃಹ ,ಕಂದಾಯ,ಆರೋಗ್ಯ ಇಲಾಖೆ ಹೊರತುಪಡಿಸಿ,

ಉಳಿದ ಎಲ್ಲಾ ಇಲಾಖೆಗಳ ಸಿಬ್ಬಂದಿಯ ಒಂದು ತಿಂಗಳ ವೇತನ ಹಿಡಿದುಕೊಳ್ಳಿ. ಇದರಿಂದ 5 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತೆ. ರಾಜ್ಯದ ಪ್ರತಿ ಕುಟುಂಬಕ್ಕೆ ₹15 ಸಾವಿರ ಹಣವನ್ನ ಹಾಕಿ. ಆಗ ಬೇಕಾದ್ರೆ ನೀವು 20 ದಿನ ಲಾಕ್​ಡೌನ್ ಮಾಡಿ, ಜನರಿಗೆ ಏನೂ ಇಲ್ಲದೇ ನೀವು ಹೀಗೆ ಮಾಡಿದ್ರೆ ಹೇಗೆ..? ಎಂದು ಸರ್ಕಾರದ ವಿರುದ್ಧವೇ ಎಂಟಿಬಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ


Spread the love

About Laxminews 24x7

Check Also

ಸನ್ನಡತೆ ಆಧಾರದ ಮೇಲೆ ರಾಜ್ಯದ 9 ಜೈಲಿನಿಂದ 31 ಕೈದಿಗಳ ಬಿಡುಗಡೆ

Spread the loveಬೆಂಗಳೂರು: ರಾಜ್ಯದ ವಿವಿಧ ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ