Breaking News

ಕೊರೋನಾ ಸೋಂಕಿನ ಹೆಚ್ಚಳ’ದ ಈ ಸಂದರ್ಭದಲ್ಲಿ, ನಿಮ್ಮ ಬಳಿ ಇರಲಿ, ಈ ‘ಸಹಾಯವಾಣಿ’ ಸಂಖ್ಯೆಗಳು.!

Spread the love

ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಬ್ಬರಿಸುತ್ತಿದೆ. ದಿನವೊಂದಕ್ಕೆ 10 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಕೊರೋನಾ ಸೋಂಕಿನ ತುರ್ತು ಸಂದರ್ಭದ ಸಹಾಯಕ್ಕಾಗಿ ಸಹಾಯವಾಣಿ ಕೂಡ ಆರಂಭಿಸಲಾಗಿದೆ. ನಿಮಗೆ ಬೇಕಾದ ಮಾಹಿತಿಯನ್ನು ನೀವು ಕುಳಿತಲ್ಲೇ ಒಂದು ಕರೆ ಮಾಡುವ ಮೂಲಕ ಪಡೆಯಬಹುದಾಗಿದೆ.

ಹೌದು.. ರಾಜ್ಯ ಆರೋಗ್ಯ ಇಲಾಖೆಯೂ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದಾಗಿ, ರಾಜ್ಯದ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಸಹಾಯವಾಣಿ ಸಂಖ್ಯೆ ಕೂಡ ಆರಂಭಿಸಿದೆ. ಅದು ರಾಜ್ಯ ಸಹಾಯವಾಣಿ ಅಲ್ಲದೇ ಜಿಲ್ಲಾ ಕೋವಿಡ್ ಸೆಂಟರ್ ಸೇರಿದಂತೆ, ಕೊರೋನಾ ಬಗ್ಗೆ ಮಾಹಿತಿ, ಬೆಡ್, ಆಂಬ್ಯುಲೆನ್ಸ್ ಬಗ್ಗೆ ಸೇರಿದಂತೆ ಎಲ್ಲವೂ ರಾಜ್ಯ ಕೋವಿಡ್ ಕಂಟ್ರೋಲ್ ರೂಂ ನಂಬರ್ ಗೆ ಕರೆ ಮಾಡುವ ಮೂಲಕ, ಪಡೆಯಬಹುದಾಗಿದೆ.

ಹೀಗಿದೆ ಸಹಾಯವಾಣಿ ಸಂಖ್ಯೆಗಳು

  • ಆಪ್ತ ಮಿತ್ರ ಸಹಾಯವಾಣಿ ಸಂಖ್ಯೆ – 14410
  • ರಾಜ್ಯ ಕೋವಿಡ್ ಕಂಟ್ರೋಲ್ ರೂಂ ನಂಬರ್ – 104, 1075, 080-46848600, 080-66692000, 9745697456, 9980299802.

ವಿಭಾಗವಾರು ಸಹಾಯವಾಣಿ ಸಂಖ್ಯೆಗಳು

  • ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ – 104
  • ಪುಡ್ ಅಂಡ್ ಸಿವಿಲ್ ಸಪ್ಲೈ ಸಹಾಯವಾಣಿ ಸಂಖ್ಯೆ – 1967, 18000 4259339
  • ಪಬ್ಲಿಕ್ ಗ್ರೇವಿಯನ್ಸ್ ಸಹಾಯವಾಣಿ ಸಂಖ್ಯೆ – 080-44554455
  • ಆಂಬ್ಯುಲೆನ್ಸ್ – 102, 108
  • ಮಹಿಳಾ ಸಹಾಯವಾಣಿ ಸಂಖ್ಯೆ – 181
  • ಪೊಲೀಸ್ – 100, 112
  • ಬಿಬಿಎಂಪಿ ಕಂಟ್ರೋಲ್ ರೂಂ – 080-22660000
  • ಕಾರ್ಮಿಕ ಸಹಾಯವಾಣಿ ಸಂಖ್ಯೆ – 155214
  • ಬೆಸ್ಕಾಂ – 1902
  • ಬಿಡಬ್ಲ್ಯೂ ಎಸ್‌ಎಸ್ ಬಿ – 1916

ನಿಮಗೆ ‘ಮೆಡಿಕಲ್ ಆಕ್ಸಿಜನ್, ರೆಮಿಡಿಸಿವಿರ್ ಇಂಜೆಕ್ಷನ್’ ಬೇಕಾದಲ್ಲಿ 89517 55722 ಈ ‘ಸಹಾಯವಾಣಿ ಸಂಖ್ಯೆ’ಗೆ ಸಂಪರ್ಕಿಸಿ

ಜಿಲ್ಲಾವಾರು ಕೋವಿಡ್-19 ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆಗಳು

  • ಬಾಗಲಕೋಟೆ – 08354-236240, 08354-236240/1077
  • ಬಳ್ಳಾರಿ – 08392-1077, 08392-277100, 8277888866 (Whatsapp no)
  • ಬೆಳಗಾವಿ – 0831-2407290(1077), 0831-2424284
  • ಬೆಂಗಳೂರು ನಗರ – 080-1077, 080-22967200
  • ಬೆಂಗಳೂರು ಗ್ರಾಮಾಂತರ – 080-29781021
  • ಬೀದರ್ – 18004254316
  • ಚಾಮರಾಜನಗರ – 08226-1077, 08226-223160
  • ಚಿಕ್ಕಬಳ್ಳಾಪುರ – 08156-1077/277071
  • ಚಿಕ್ಕಮಗಳೂರು – 08262-238950, 08262-1077
  • ಚಿತ್ರದುರ್ಗ – 08194-222050/222044/222027/222056/222035
  • ದಾವಣಗೆರೆ – 08192-234034, 08192-1077
  • ಧಾರವಾಡ – 0836-1077/2447547
  • ಗದಗ – 08372-239177, 08372-1077
  • ಹಾಸನ – 08172-261111/1077
  • ಹಾವೇರಿ – 08375-249102/249104
  • ಕಲಬುರ್ಗಿ – 1047, 08472278698, 08472278677, 08472278648, 08472278604
  • ಉತ್ತರ ಕನ್ನಡ – 1077, 08382-229857
  • ಕೋಲಾರ – 08152-243521
  • ಕೊಪ್ಪಳ – 08539-225001
  • ಕೊಡಗು – 08272220606, 08272-1077
  • ಮಂಡ್ಯ – 08231-1077, 08232-224655
  • ದಕ್ಷಿಣ ಕನ್ನಡ – 0824-1077, 0824-2442590
  • ಮೈಸೂರು – 0821-2423800, 0821-1077
  • ರಾಯಚೂರು – 08532-228559, 08532-1095, 08532-1077, 08532-226383, 08532-226020
  • ರಾಮನಗರ – 8277517672, 080-27271195, 080-27276615
  • ಶಿವಮೊಗ್ಗ – 08182-221010, 08182-1077
  • ತುಮಕೂರು – 08162-1077/ 278787/ 251414/ 257368/ 252025/ 252321
  • ಉಡುಪಿ – 9663957222, 9663950222
  • ವಿಜಯಪುರ – 08352-1077, 08352221261
  • ಯಾದಗಿರಿ – 08473-253950, 9449933946

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://covid19.karnataka.gov.in/page/Helpline/en ಈ ಲಿಂಕ್ ಯೂ ಮಾಹಿತಿಯನ್ನು ಪಡೆಯಬಹುದಾಗಿದೆ.

ಅಂದಹಾಗೇ, ನಿನ್ನೆ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10,497 ಸೇರಿದಂತೆ ರಾಜ್ಯಾಧ್ಯಂತ 14,738 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿತ್ತು. ಇವರಲ್ಲಿ ಇಂದು 3,591 ಜನರು ಸೇರಿದಂತೆ ಇದುವರೆದೆ 9,99,958 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ರಾಜ್ಯದಲ್ಲಿ 96,561 ಸಕ್ರೀಯ ಸೋಂಕಿತರು ಇರುವುದಾಗಿ ಆರೋಗ್ಯ ಇಲಾಖೆಯು ಕೊರೋನಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿತ್ತು.

ಇನ್ನೂ ಬಳ್ಳಾರಿಯಲ್ಲಿ ಆರು ಸೋಂಕಿತರು, ಬೆಳಗಾವಿಯಲ್ಲಿ ಒಬ್ಬರು, ಬೆಂಗಳೂರು ನಗರದಲ್ಲಿ 30 ಸೋಂಕಿತರು, ಬೀದರ್ ನಲ್ಲಿ ಇಬ್ಬರು, ಧಾರವಾಡದಲ್ಲಿ ಮೂವರು, ಹಾಸನದಲ್ಲಿ ನಾಲ್ವರು, ಕಲಬುರ್ಗಿ, ಕೋಲಾರದಲ್ಲಿ ಓರ್ವ, ಮೈಸೂರಿನಲ್ಲಿ ಐವರು, ರಾಮನಗರ, ಶಿವಮೊಗ್ಗ ತಲಾ ಒಬ್ಬರು, ತುಮಕೂರು, ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಮತ್ತು ವಿಜಯಪುರದಲ್ಲಿ ಒಬ್ಬರು ಸೇರಿದಂತೆ 66 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 13,112ಕ್ಕೆ ಏರಿಕೆಯಾಗಿತ್ತು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ