Breaking News

ಕೊವಿಡ್-19 ನಿಯಂತ್ರಣಕ್ಕೆ ಹೊಸ ಅಸ್ತ್ರ; ಲಾಕ್​ಡೌನ್​ ಮಾಡುವ ಬದಲು ಈ ಯೋಜನೆಗೆ ಸಿದ್ಧವಾಗ್ತಿದೆಯಾ ಸರ್ಕಾರ?

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್​ ಸೋಂಕಿನ ಪ್ರಸರಣ ದಿನೇದಿನೆ ಏರಿಕೆಯಾಗುತ್ತಿದ್ದು, ಸರ್ಕಾರ ಮತ್ತೊಮ್ಮೆ ಲಾಕ್​ಡೌನ್​ ಹೇರಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆಯಾಗಿದ್ದು, ಏಪ್ರಿಲ್​ 20ರವರೆಗೆ ನೈಟ್​ ಕರ್ಫ್ಯೂ ಮುಂದುವರಿಯಲಿದೆ. ಮಂಗಳವಾರ ಇನ್ನೊಂದು ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ನಿನ್ನೆ ತಿಳಿಸಿದ್ದಾರೆ. ಆದರೆ ಸರ್ಕಾರ ಕೊರೊನಾವನ್ನು ಮಣಿಸಲು ಇನ್ನೊಂದು ಹೊಸ ಪ್ಲ್ಯಾನ್​ ಮಾಡಿದೆ ಎನ್ನಲಾಗಿದೆ. ನೈಟ್​ ಕರ್ಫ್ಯೂ ಸಮಯ ಬದಲಿಸಲು ಮುಂದಾಗಿದೆ.

ಬಹುತೇಕ ಕಚೇರಿಗಳು ಸಂಜೆ 6 ಗಂಟೆಗೇ ಬಂದ್​ ಆಗುವ ಹಿನ್ನೆಲೆಯಲ್ಲಿ 6ಗಂಟೆಯಿಂದಲೇ ನೈಟ್ ಕರ್ಫ್ಯೂ ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಲಾಗುತ್ತಿದೆ. ಸಂಜೆ 6 ಗಂಟೆ ನಂತರ ಜನರು ಗುಂಪುಗೂಡುವುದು ಹೆಚ್ಚಾಗುತ್ತಿದೆ. ವಾಕಿಂಗ್​, ಔಟಿಂಗ್, ಶಾಪಿಂಗ್​, ಸಿನಿಮಾ.. ಚಾಟ್ಸ್​ ನೆಪದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಬೀಳುತ್ತಿದ್ದಾರೆ. ಹೀಗಾಗಿ ಸಂಜೆ 6ಗಂಟೆಯಿಂದಲೇ ನೈಟ್​ಕರ್ಫ್ಯೂ ಜಾರಿ ಮಾಡುವ ಬಗ್ಗೆ ತಜ್ಞರಿಂದ ಸಲಹೆಗಳು ವ್ಯಕ್ತವಾಗಿವೆ.

ಹಾಗೇ, ಹೋಟೆಲ್, ರೆಸ್ಟೋರೆಂಟ್​ಗಳಿಂದ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಬೇಕು. ಮಾಲ್​ಗಳನ್ನು ಸಂಪೂರ್ಣವಾಗಿ ಬಂದ್​ ಮಾಡಬೇಕು. ಎಸಿ ಸಹಿತ ಮಳಿಗೆಗಳಲ್ಲಿ ಅದನ್ನು ತೆಗೆಯಬೇಕು ಎಂಬಿತ್ಯಾದಿ ಸಲಹೆಗಳನ್ನೂ ಸರ್ಕಾರಕ್ಕೆ ನೀಡಲಾಗಿದೆ.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ