Breaking News

ಮಾರ್ಚ್ 22, 2020 : ಸರಿ ಒಂದು ವರ್ಷದ ಹಿಂದೆ ಈ ದಿನ ಏನಾಯಿತು ನೆನಪಿದೆಯೇ? ಇಲ್ಲಿದೆ ವೈರಲ್ ವಿಡೀಯೋ

Spread the love

ನವದೆಹಲಿ : ಮಾರ್ಚ್ 22, 2020 ರ ದಿನವನ್ನು ಯಾರು ಮರೆಯಲು ಸಾಧ್ಯವಿಲ್ಲ? ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ ಭಾರತದ ಜನತೆ ಮನೆಗಳಲ್ಲಿ ಬಂಧಿಯಾಗಿ, ನಂತರ ಸಂಜೆ ಕೊರೋನಾ ಯೋಧರಿಗೆ ಗೌರವವನ್ನು ವ್ಯಕ್ತಪಡಿಸಲು ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು.

2020ರ ಮಾರ್ಚ್ 22ರ ದಿನವನ್ನು ಜನತಾ ಕರ್ಫ್ಯೂ ಎಂದು ಕರೆಯಲಾಗುತ್ತದೆ. ಇಂದು, ಸಾರ್ವಜನಿಕ ಕರ್ಫ್ಯೂ ಆಗಿ ಒಂದು ವರ್ಷ ಕಳೆದಿದೆ. ಅನೇಕ ಮೋಜಿನ ನೆನಪುಗಳು ಜನರ ಮನಸ್ಸಿನಲ್ಲಿ ಭೀತಿಯ ನಡುವೆ ನಡೆದಿದೆ. ಇಂದು ನಾವು ನಿಮಗೆ ಒಂದು ವೀಡಿಯೋವನ್ನು ತೋರಿಸುತ್ತೇವೆ, ಅದು ಸಾರ್ವಜನಿಕ ಕರ್ಫ್ಯೂವಿನ ಮೋಜಿನ ನೆನಪನ್ನು ಮತ್ತೆ ತರಿಸುತ್ತದೆ.

ವಾಸ್ತವವಾಗಿ ಕರೋನಾ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಇಡೀ ದೇಶವು ಅದರ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಿತು. ಚೀನಾದಲ್ಲಿ ಸಾವುಗಳು ಮತ್ತು ಜಗತ್ತಿನಾದ್ಯಂತ ಕರೋನಾ ಬಗ್ಗೆ ಆಘಾತಕಾರಿ ವರದಿಗಳ ನಡುವೆ, ಪ್ರಧಾನಿ ಮೋದಿ ಅವರು ಮಾರ್ಚ್ 22, 2020ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕ ಕರ್ಫ್ಯೂ ವನ್ನು ಘೋಷಿಸಿದರು. ಅಪಾಯದಲ್ಲಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಅರ್ಪಿಸಬೇಕೆಂದು ಪ್ರಧಾನಿ ಕರೆ ನೀಡಿದರು. ಸಂಜೆ 5 ಗಂಟೆಗೆ ಸರಿಯಾಗಿ ಬಾಗಿಲು ಅಥವಾ ಬಾಲ್ಕನಿಯಲ್ಲಿ ನಿಂತು ಐದು ನಿಮಿಷ ಕರೋನಾ ವಾರಿಯರ್ಸ್ ಗೌರವಾರ್ಥ ವಾಗಿ ಚಪ್ಪಾಳೆ ತಟ್ಟಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪ್ರಧಾನಿಯವರ ಮನವಿಗೆ ಸ್ಪಂಧಿಸಿ ನಿಗದಿತ ಸಮಯದಲ್ಲಿ ಇಡೀ ದೇಶವೇ ಚಪ್ಪಾಳೆ, ಗಂಟೆ, ಜಾಗಟೆ ತಟ್ಟಿತು, ಈ ಶಬ್ಧ ಇಡೀ ದೇಶದಲ್ಲಿ ಮಾರ್ಧನಿಸಿತು. ಕೆಲವರು ಚಪ್ಪಾಳೆ ತಟ್ಟುವ ರೀತಿ, ತಮಾಷೆಯ ವಿಡಿಯೋ ವೈರಲ್ ಆಗಿತ್ತು. ಅಂತಹ ವೈರಲ್ ಆದ, ಫೋಟೊ ವಿಡೀಯೋಗಳನ್ನು ಒಂದು ವರ್ಷದ ಬಳಿಕ ಇದೀಗ ವೈರಲ್ ಆಗಿವೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ