Breaking News

ಕಾಂಗ್ರೆಸ್ಸಿಗರೇ ಶರ್ಟ್‌, ಪ್ಯಾಂಟ್‌ ಬಿಚ್ಚಿದ್ದಾರಾ.? : ರಮೇಶ್ ಜಾರಕಿಹೊಳಿಗೆ ಡಿಚ್ಚಿ ಹೊಡೆದ ಡಿಕೆ ಶಿವಕುಮಾರ್

Spread the love

ಬೆಂಗಳೂರು : ರಮೇಶ್ ಜಾರಕಿಹೊಳಿ ಹೇಳಿದಂತ ಮಹಾನಾಯಕ ಯಾರು ಅಂತ ಗೊತ್ತಿಲ್ಲ. ನನ್ನ ಮೇಲೆ ಹೇಳಲಿ ಬಿಡಿ. ಇದು ರಾಜಕೀಯ ಚೆಸ್ ಗೇಮ್ ಆಗಿದೆ. ರಮೇಶ್ ಜಾರಕಿಹೊಳಿಯೇ ಸಿಡಿ ನಕಲಿ ಎಂದಿದ್ದಾರೆ. ಸಿಡಿ ಫೇಕ್ ಅಂತ ಹೇಳುವುದಾದರೇ ತನಿಖೆ ಏಕೆ.? ತನಿಖೆಗೆ ಬಿಜೆಪಿಯವರು ಏಕೆ ಒತ್ತಾಯಿಸ್ತಿದ್ದಾರೆ.? ಕಾಂಗ್ರೆಸ್ ನವರು ಏನ್ ಶರ್ಚ್, ಪ್ಯಾಂಟ್ ಬಿಚ್ಚಿದ್ರಾ.? ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿಗೆ ಡಿಚ್ಚಿ ಹೊಡೆದಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಬಿಜೆಪಿ ಮುಖಂಡರ ಮಾತಿಗೆ ಪ್ರತಿಕ್ರಿಯಿಸಿದಂತ ಅವರು, ಸಿಡಿಯಲ್ಲಿ ಕನ್ನಡಿಗರ ಬಗ್ಗೆ ಅವಹೇಳನ ಮಾಡಿದ್ದಾರೆ. ಬೆಳಗಾವಿ ಒಂದು ರಾಜ್ಯ ಎಂದಿದ್ದಾರೆ. ಕನ್ನಡಿಗರು ಯಾಕೆ ಸುಮ್ನಿದ್ದಾರೋ ಗೊತ್ತಿಲ್ಲ ಎಂದರು.

ನನ್ನ ಮಿತ್ರನಾದಂತ ಸೋಮಶೇಖರ್ ಅವರನ್ನು ಬಿಜೆಪಿಗಿಂತ ಜಾಸ್ತಿ ಹತ್ತಿರದಿಂದ ಬಲ್ಲೆ. ನಮ್ಮ ಪಕ್ಷದ ಅಧ್ಯಕ್ಷರಾಗಿದ್ದರು, ಅವರಿಗೆ ಅಷ್ಟು ದೊಡ್ಡ ಸ್ಥಾನ ಸಿಕ್ಕಿದೆ. 20 ವರ್ಷದಿಂದ ನಾವು ಈ ಕೆಲಸ ಮಾಡಿದ್ದಾರೆ ಎಂಬುದಾಗಿ ಆರೋಪಿಸುತ್ತಾರಲ್ಲಾ.. ಏನೇನ್ ಕೆಲಸ ಮಾಡಿದ್ದಾರೆ ಎಂಬುದಾಗಿ ಇವರದ್ದೂ ಸೇರಿಸಿ ಹೇಳಲಿ ಎಂಬುದಾಗಿ ಕಿಡಿ ಕಾರಿದರು.


Spread the love

About Laxminews 24x7

Check Also

ಶಾಲಾ ಮಕ್ಕಳ ಆತ್ಮಹತ್ಯೆ ತಡೆಗೆ ನೀತಿ ಜಾರಿ – ಮಹದೇವಪ್ಪ

Spread the loveಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ, ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ