Breaking News

CD ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ; ರಾಜಕೀಯ ಹೋದ್ರೂ ತೊಂದರೆಯಿಲ್ಲ.. ಇವರಿಗೆ ತಕ್ಕ ಶಾಸ್ತಿ ಮಾಡ್ತೇವೆ’

Spread the love

ಬೆಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ CD ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ಸಿಡಿ ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ. ಈಗಾಗಲೇ ಆ 9 ಜನರ ಮಾಹಿತಿ ನಮಗೆ ಸಿಕ್ಕಿದೆ. ಆ 9 ಜನರ ಪೈಕಿ ಕೆಲವರು ಪ್ರಭಾವಿಗಳು ಇದ್ದಾರೆ. ಪ್ರಭಾವಿಗಳು ಇರುವ ಹಿನ್ನೆಲೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ. ದೂರು ದಾಖಲಿಸಲು ಮತ್ತಷ್ಟು ಮಾಹಿತಿ ಸಂಗ್ರಹಿಸ್ತಿದ್ದೇವೆ ಎಂದು ಹೇಳಿದರು.

ಮೂರ್ನಾಲ್ಕು ದಿನಗಳಲ್ಲಿ ದೂರು ದಾಖಲಿಸುತ್ತೇವೆ. ದೂರಿನಲ್ಲಿ ಷಡ್ಯಂತ್ರ ಮಾಡಿದ ಪ್ರಭಾವಿಗಳ ಹೆಸರು ಸೇರಿಸಿ ದೂರು ನೀಡುತ್ತೇವೆ. ನಮ್ಮ ರಾಜಕೀಯ ಹೋದರೂ ತೊಂದರೆ ಇಲ್ಲ. ಇದರಲ್ಲಿ ಷಡ್ಯಂತ್ರ ಮಾಡಿದವರಿಗೆ ತಕ್ಕಶಾಸ್ತಿ ಮಾಡ್ತೇವೆ ಎಂದು ಸಹ ಹೇಳಿದರು.

ಹೊರರಾಜ್ಯದ ಡಿಟೆಕ್ಟಿವ್​ ಏಜೆನ್ಸಿಗೆ ಕೇಸ್​ ವಹಿಸಿದ್ದೇವೆ. ಪ್ರಕರಣದ ಮಾಹಿತಿ ಕಲೆ ಹಾಕಲು ಕೇಸ್ ನೀಡಿದ್ದೇವೆ. ಬೆಳಗಾವಿಯಲ್ಲಿ, ಗೋಕಾಕ್​ನಲ್ಲಿ ದೂರು ದಾಖಲಿಸಬೇಕಾ ಅಥವಾ ಬೆಂಗಳೂರಿನಲ್ಲಿ ದಾಖಲಿಸಬೇಕಾ ಎಂಬ ಬಗ್ಗೆ ಚರ್ಚೆ ಮಾಡ್ತೇವೆ. ಶೀಘ್ರದಲ್ಲೆ ದೂರು ದಾಖಲಿಸ್ತೇವೆ, ಹಿಂದೆ ಸರಿಯಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುಂಚೆ, ತಮ್ಮ ವಿರುದ್ಧ ಬಿಡುಗಡೆಯಾದ ಸಿಡಿ ಬಗ್ಗೆ ಸ್ಪಷ್ಟನೆ ನೀಡಲು ಇಂದು ಸದಾಶಿವನಗರದ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಮೇಶ್ ಜಾರಕಿಹೊಳಿ ಭಾವುಕರಾದರು. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಷಡ್ಯಂತ್ರದಿಂದಲೇ ನನಗೆ ಹೀಗೆ ಮಾಡಿದ್ದಾರೆ ಅಂತಾ ಅಳಲು ತೋಡಿಕೊಂಡಿದರು.

2020ರ ಫೆಬ್ರವರಿ 26ರಂದು ನಾನು ಸಚಿವನಾದೆ. ಆಗ ಒಬ್ಬ ಮಹಾನಾಯಕ ನನಗೆ ಚಾಲೆಂಜ್ ಹಾಕಿದ್ದ. ಈ ಇಲಾಖೆಯನ್ನ ಕೇವಲ 3 ತಿಂಗಳು ನಡೆಸ್ತಾನೆಂದಿದ್ದ. ನಾನು ರಾಜ್ಯವೇ ಮೆಚ್ಚುವಂತೆ ನನ್ನ ಇಲಾಖೆ ನಡೆಸಿದ್ದೆ. ಹೀಗಾಗಿ, ನನ್ನ ವಿರುದ್ಧ ಅವರು ಷಡ್ಯಂತ್ರ ನಡೆಸಿದ್ದಾರೆ. ಆ ಮಹಾನಾಯಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಇನ್ನು ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, CD 100% ನಕಲಿ, ಈ CDಯಲ್ಲಿ ಸತ್ಯಾಂಶ ಇಲ್ಲ. ಯುವತಿಗೆ ನೀಡಿರುವುದು 50 ಲಕ್ಷ ಅಲ್ಲ, 5 ಕೋಟಿ ರೂ.ವಿದೇಶದಲ್ಲಿ 2 ಫ್ಲ್ಯಾಟ್‌ಗಳನ್ನು ಕೊಡಿಸಿರುವ ಬಗ್ಗೆ ಮಾಹಿತಿ ಇದೆ ಎಂದರು. ಬೇರೆ ಸೆಕ್ಸ್ ಹಗರಣಗಳಲ್ಲಿ 15-20 ಕೋಟಿ ಖರ್ಚು ಆದರೆ ನನ್ನನ್ನು ಮುಗಿಸಲು ನೂರಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ರಾಜಕೀಯವಾಗಿ ಮುಗಿಸಲು ದೊಡ್ಡ ಷಡ್ಯಂತ್ರ ನಡೆದಿದೆ. 26 ಗಂಟೆ ಮೊದಲೇ CD ಬಿಡುಗಡೆ ಬಗ್ಗೆ ಹೈಕಮಾಂಡ್‌, ನನ್ನ ಹಿತೈಷಿಗಳು ಮಾಹಿತಿ ನೀಡಿದ್ದರು. ನಾಳೆ 5-6 ಗಂಟೆಗೆ CD ಬಿಡುಗಡೆ ಆಗುತ್ತೆಂದು ಹೇಳಿದ್ರು. ಭಯ ಪಡಬೇಡ, ಕಾನೂನು ಕ್ರಮಕೈಗೊಳ್ಳೋಣ ಎಂದಿದ್ರು. ಸಿಎಂ, ಬಸವರಾಜ ಬೊಮ್ಮಾಯಿ ಜತೆಯೂ ಚರ್ಚಿಸಿದ್ದೆ. ಸುಮಾರು ಒಂದು ಗಂಟೆ ಕಾಲ ಸಭೆಯಲ್ಲಿ ಭಾಗಿಯಾಗಿದ್ದೆ. ಸಿಎಂ ಎದುರು ಕುಳಿತಿದ್ದರು, ಬೊಮ್ಮಾಯಿ ಪಕ್ಕದಲ್ಲಿದ್ದರು. ನಾನು ಭಯಪಡಬೇಕಾದ ಅಗತ್ಯವಿರಲಿಲ್ಲ. ಏಕೆಂದರೆ ನಾನು ಯಾವುದೇ ತಪ್ಪು ಮಾಡಿರಲಿಲ್ಲ.

ನಾನು ಮತ್ತೆ ರಾಜಕೀಯಕ್ಕೆ ಬರುತ್ತೇನೋ ಇಲ್ವೋ ಗೊತ್ತಿಲ್ಲ. ನನಗೆ ರಾಜಕಾರಣದ ಮೇಲೆ ಆಸಕ್ತಿ ಇಲ್ಲ. ಅವರನ್ನು ಜೈಲಿಗೆ ಹಾಕುವವರೆಗೂ ಬಿಡುವುದಿಲ್ಲ. ಎಷ್ಟೇ ಖರ್ಚಾದ್ರೂ ಅವರನ್ನ ಜೈಲಿಗೆ ಹಾಕಿಸದೆ ಬಿಡುವುದಿಲ್ಲ. ಎಷ್ಟೇ ಪ್ರಭಾವಿಯಾಗಿದ್ದರೂ ಸರಿ, ಜೈಲಿಗೆ ಹಾಕಿಸುತ್ತೇನೆ ಎಂದು ಹೇಳಿದ್ರು.

ಇಂದು ಕಬ್ಬನ್​ಪಾರ್ಕ್​ ಠಾಣೆಗೆ ಭೇಟಿ ನೀಡಿದ್ದ ದಿನೇಶ್​
ಈ ಮಧ್ಯೆ, ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇಂದು ಕಬ್ಬನ್​ಪಾರ್ಕ್​ ಠಾಣೆಗೆ ಭೇಟಿ ನೀಡಿದ್ದರು. ಪ್ರಕರಣ ಹಿಂಪಡೆಯುವ ಬಗ್ಗೆ ದಿನೇಶ್​ ಕಲ್ಲಹಳ್ಳಿಯನ್ನು ವಿಚಾರಣೆ ನಡೆಸಿರುವ ಪೊಲೀಸರು ಅವರ ಹೇಳಿಕೆ ದಾಖಲಿಸಿದರು. ಜೊತೆಗೆ, ಈ ಬಗ್ಗೆ ನಾಳೆ ಅಧಿಕೃತವಾಗಿ ತಿಳಿಸುವುದಾಗಿ ಪೊಲೀಸರ ಸ್ಪಷ್ಟನೆ ನೀಡಿದ್ದಾರೆ ಎಂದು ಟಿವಿ9ಗೆ ದೂರುದಾರ‌ ದಿನೇಶ್ ಪರ ವಕೀಲರು ಮಾಹಿತಿ ಕೊಟ್ಟಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ