Breaking News

ವಾಟ್ಸಾಪ್ ಬಳಕೆದಾರರಿಗೆ ‘ನೆಮ್ಮದಿಯ ಸುದ್ದಿ: ಫೆ.8ರಂದು ಯಾವುದೇ ಖಾತೆ ಡಿಲೀಟ್ ಮಾಡುವುದಿಲ್ಲ ಸ್ಪಷ್ಟನೆ

Spread the love

ನವದೆಹಲಿ: ಬಹುದೊಡ್ಡ ಹಿನ್ನಡೆ ಯ ನಂತರ ವಾಟ್ಸಾಪ್ ತನ್ನ ಯೋಜಿತ ಗೌಪ್ಯತಾ ಅಪ್ ಡೇಟ್ ಅನ್ನು ಮುಂದೂಡಿದೆ. ಖಾಸಗಿತನ ನವೀಕರಣವನ್ನು ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದೆ. ಫೆಬ್ರವರಿ 8 ರಂದು ಯಾರ ಖಾತೆಯೂ ಅಮಾನತು ಅಥವಾ ಡಿಲೀಟ್ ಮಾಡುವುದಿಲ್ಲ ಅಂತ ಹೇಳಿದೆ.ವಾಟ್ಸ್ ಆಪ್ ಹೇಗೆ ಡೇಟಾ ಸಂಗ್ರಹಿಸುತ್ತದೆ ಮತ್ತು ಬಳಕೆ ಮಾಡುತ್ತದೆ ಎಂಬುದರ ಬಗ್ಗೆ ಈ ಅಪ್ ಡೇಟ್ ನಲ್ಲಿ ಪಾರದರ್ಶಕತೆ ಯನ್ನು ಒದಗಿಸಲಾಗುತ್ತದೆ ಎಂದು ಕಂಪೆನಿ ಜನರಿಗೆ ಭರವಸೆ ಯನ್ನು ನೀಡುತ್ತದೆ ಅಂತ ಇದೇ ವೇಳೇ ಹೇಳಿದೆ.

ಫೇಸ್ ಬುಕ್ ಸರ್ವರ್ ಗಳ ಜೊತೆ ಡೇಟಾ ಹಂಚಿಕೊಳ್ಳುವುದನ್ನು ಒಳಗೊಂಡಂತೆ ವಾಟ್ಸಾಪ್ ತನ್ನ ಸೇವಾ ನಿಯಮಗಳಿಗೆ ತಿದ್ದುಪಡಿ ಯನ್ನು ಅಂಗೀಕರಿಸಲು ತನ್ನ ಫೆಬ್ರವರಿ 8ರ ಗಡುವನ್ನು ರದ್ದುಗೊಳಿಸಿದೆ.ವಾಟ್ಸಾಪ್ ಬಳಕೆದಾರರು ಈ ತಿಂಗಳು ಹೊಸ ಗೌಪ್ಯತೆ ನೀತಿ ಮತ್ತು ನಿಯಮಗಳನ್ನು ಸಿದ್ಧಪಡಿಸುತ್ತಿರುವುದಾಗಿ ಅಧಿಸೂಚನೆಯನ್ನು ಸ್ವೀಕರಿಸಿದ್ದು, ಫೇಸ್ ಬುಕ್ ಆಪ್ ನೊಂದಿಗೆ ಕೆಲವು ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಹಕ್ಕನ್ನು ಅದು ಕಾಯ್ದಿರಿಸಿದೆ ಅಂತ ಹೇಳಿತ್ತು.


Spread the love

About Laxminews 24x7

Check Also

ಆಂತರಿಕ ಕಲಹ ಮುಂದುವರೆದ್ರೆ ಈ ಸರ್ಕಾರ ಇರುವುದಿಲ್ಲ, 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಕೂಡ ಇರಲ್ಲಾ:,ಶೆಟ್ಟರ್

Spread the loveಚಾಮರಾಜನಗರ: ಇದೇ ರೀತಿ ಆಂತರಿಕ ಕಲಹ ಮುಂದುವರೆದ್ರೆ ಈ ಸರ್ಕಾರ ಇರುವುದಿಲ್ಲ, 5 ವರ್ಷ ಸಿಎಂ ಆಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ