ಬೆಂಗಳೂರು, ಜು.15- ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ಕೊರೊನಾಗೆ ಔಷಧಿ ಕಂಡು ಹಿಡಿದು ಈಗಾಗಲೇ ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದ್ದು, ಅದನ್ನು ಬಿಡುಗಡೆ ಮಾಡಲು ಜಾಗತಿಕ ಪೈಪೋಟಿ ಆರಂಭವಾಗಿದೆ.
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇಂದು ಹೇಳಿಕೆ ನೀಡಿದ್ದು, ದಾಖಲಾರ್ಹ ಸಮಯದಲ್ಲಿ ಅಮೆರಿಕಾ ಕೊರೊನಾಗೆ ಔಷಧಿಯನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ.
ರಷ್ಯಾ ಈಗಾಗಲೇ ತಾನು ಔಷಧಿ ಕಂಡು ಹಿಡಿದಿದ್ದು, ಮಾನವ ಪ್ರಯೋಗ ಮಾಡಿ ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿತ್ತು. ಆಗಸ್ಟ್ ಮಧ್ಯ ಭಾಗದಲ್ಲಿ ಔಷಧಿಯನ್ನು ಬಿಡುಗಡೆ ಮಾಡುವ ಮುನ್ಸೂಚನೆಯನ್ನು ರಷ್ಯ ನೀಡಿತ್ತು.
ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಅಮೆರಿಕಾ ಪೈಪೋಟಿಗೆ ಬಿದ್ದಿದೆ. ಬ್ರೆಕಿಂಗ್ ಟೈಮ್‍ನಲ್ಲಿ ಅಮೆರಿಕಾ ಔಷಧಿ ಬಿಡುಗಡೆ ಮಾಡಲಿದ್ದೇವೆ. ಪ್ರಯೋಗಗಳು ತುರ್ತಾಗಿ ನಡೆಯುತ್ತಿದೆ. ಎಲ್ಲವೂ ಯಶಸ್ವಿ ಹಾದಿಯಲ್ಲಿದೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.