Breaking News

ಸರಿಗಮಪ ಚೆನ್ನಪ್ಪ ಹುದ್ದಾರ್ ಎಲ್ಲಿ ಕಾಣೆಯಾಗಿದ್ದಾರೆ?

Spread the love

ಸರಿಗಮಪ ಚೆನ್ನಪ್ಪ ಹುದ್ದಾರ್ ಎಲ್ಲಿ ಕಾಣೆಯಾಗಿದ್ದಾರೆ? ಜೀ ಕನ್ನಡ ಸಿರಿಗಮಪ ಸೀಸನ್‌ 11ರ ವಿಜೇತ ಚನ್ನಪ್ಪ ಹುದ್ದಾರ್ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ ನಂತರ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ನೆಟ್ಟಿಗರ ಆರೋಪ. ಚನ್ನಪ್ಪ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಕ್ಲಾರಿಟಿ ಇಲ್ಲಿದೆ ನೋಡಿ.

ಚೆನ್ನಪ್ಪ ಹುದ್ದಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿನ್ನೆಲೆ ಗಾಯಕ. ಇವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಸರಿಗಮಪ ಕಾರ್ಯಕ್ರಮದ 11 ನೇ ಸೀಸನ್ ನ ವಿಜೇತರು. ಈ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಚೆನ್ನಪ್ಪ ನಂತರ ಹಲವು ಚಿತ್ರಗಳ ಗೀತೆಗೆ ಧ್ವನಿಯಾಗಿದ್ದಾರೆ. ತಮ್ಮ ಚಿಕ್ಕಪ್ಪನಿಂದ ನಟನಾ ತರಬೇತಿ ಪಡೆದು , ಇತ್ತೀಚೆಗೆ ನಾಯಕನಾಗಿ ಕನ್ನಡ ಸಿನಿಮರಂಗವನ್ನು ಕೂಡಾ ಪ್ರವೇಶ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ಸರಿಗಮಪ ಮೂಲಕ ಕಿರುತೆರೆಗೆ ಪರಿಚಯವಾದ ಚನ್ನಪ್ಪ , ಸರಿಗಮಪ ಸೀಸನ್ 11ರ ವಿಜೇತನಾಗಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಹಿನ್ನಲೆ ಗಾಯಕರಾಗಿ ಹಾಡಿದ್ದಾರೆ . 2019ರಲ್ಲಿ ಲೈಟಾಗಿ ಲವ್ವಾಗಿದೆ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಹಾಗೂ ಈಗ ಮಾರ್ಲಾಮಿ ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿದ್ದು, ಸಿನಿಮಾ ಚಿತ್ರೀಕರಣ ಶುರುವಾಗಿದೆ.

ಇನ್ನೂ ಇತ್ತೀಚೆಗೆ ಅಷ್ಟೇ ಮುಕ್ತಾಯಗೊಂಡ ಸರಿಗಮಪ ಸೀಸನ್ ೧೭ ರಲ್ಲಿ ಚೆನ್ನಪ್ಪ ಜೂರಿ ಜೆಡ್ಜ್‌ ಆಗಿಯೂ ಕಾಣಿಸಿಕೊಂಡಿದ್ದರು. ಇನ್ನು ಚಿತ್ರರಂಗದಲ್ಲಿ ಚನ್ನಪ್ಪಗೆ ಸ್ಫೂರ್ತಿ ಎಂದರೆ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೇಳುತ್ತಾರೆ. ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಚನ್ನಪ್ಪ ಹಾಡುತ್ತಾರೆ. ಇನ್ನು ಚೆನ್ನಪ್ಪ ಲೈಟಾಗಿ ಲವ್ವಾಗಿದೆ ಎನ್ನುವ ಸಿನಿಮಾದಲ್ಲಿನಾಯಕರಾಗಿ ನಟಿಸುತ್ತಿದ್ದು , ಸಂಪೂರ್ಣವಾಗಿ ಉತ್ತರ ಕರ್ನಾಟಕದವರೇ ತೊಡಗಿಸಿಕೊಂಇಡರುವ ಈ ಸಿನಿಮಾವನ್ನು ಗುರುರಾಜ ಗದಾಡಿ ನಿರ್ದೇಶನ ಮಾಡುತ್ತಿದ್ದಾರೆ. ಕ್ಯಾಸೆಟ್‌ಗಳಿದ್ದ ಕಾಲದಲ್ಲಿ ಉತ್ತರ ಕರ್ನಾಟಕದ ಎಷ್ಟೋ ಗೀತೆಗಳಿಗೆ ಗುರುರಾಜ ಅವರು ಸಾಹಿತ್ಯ ಬರೆದು ಫೇಮಸ್‌ ಆಗಿದ್ದವರು. ಅದಾದ ಮೇಲೆ ಕಿರು ಚಿತ್ರವನ್ನು ಮಾಡಿದರು. ಈಗ ಲೈಟಾಗಿ ಲವ್ವಾಗಿದೆ ಎಂಬ ಸಿನಿಮಾವನ್ನು ತಾವೇ ಬರೆದು, ನಿರ್ದೇಶನ ಮಾಡಿ ನಿರ್ಮಾಣದಲ್ಲಿಯೂ ಪಾಲುದಾರರಾಗಿದ್ದಾರೆ. ಈ ಸಿನಿಮಾದಲ್ಲಿಕಿ ರುತೆರೆಯ ಕಲಾವಿದ ಸಚಿನ್‌ ತಿಮ್ಮಯ್ಯ ಎರಡನೇ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ಧಾರವಾಡ, ದಿವ್ಯಾ ನಾಯಕಿಯರಾಗಿದ್ದಾರೆ. ಪ್ರದೀಪ್‌ ತಿಪಟೂರು, ಅನ್ವಿತಾ, ಯಲ್ಲೇಶ್‌ಕುಮಾರ್‌, ಚೈತ್ರಾರೇಮಠ, ರತಿಕಾ ಗೋಕಾಕ್‌, ಅಂಕಿತಾ, ಸೋನಿ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ