ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಶತಮಾನೋತ್ಸವ
ಡಿಸೆಂಬರ್ 20 ರಿಂದ 26 ರ ವರೆಗೆ ವಿಶೇಷ ಕಾರ್ಯಕ್ರಮ; ಅಧ್ಯಕ್ಷ ಅವಿನಾಶ್ ಪೋತದಾರ್
ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಶತಮಾನೋತ್ಸವ
ಡಿಸೆಂಬರ್ 20 ರಿಂದ 26 ರ ವರೆಗೆ ವಿಶೇಷ ಕಾರ್ಯಕ್ರಮ
ವಿವಿಧ ಸಚಿವರು, ಶಾಸಕರು, ಉಪನ್ಯಾಸಕರು, ಗಣ್ಯರ ಉಪಸ್ಥಿತಿ
ಅಧ್ಯಕ್ಷ ಅವಿನಾಶ್ ಪೋತದಾರ್ ಮಾಧ್ಯಮಗೋಷ್ಟಿ
ಡಿಸೆಂಬರ್ 20 ರಿಂದ 26 ರ ವರೆಗೆ ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಉಪನ್ಯಾಸಕರು, ಶಾಸಕರು, ಸಚಿವರು, ಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆಂದು ಸೊಸೈಟಿಯ ಅಧ್ಯಕ್ಷರಾದ ಅವಿನಾಶ್ ಪೋತದಾರ್ ಅವರು ತಿಳಿಸಿದರು.
ಇನ್ ನ್ಯೂಸ್’ನೊಂದಿಗೆ ಅವರು ಮಾತನಾಡಿದರು. ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯೂ
ಶತಮಾನೋತ್ಸವವನ್ನು ಆಚರಿಸುತ್ತಿದೆ. 1925 ರಲ್ಲಿ ಬಿ.ಕೆ. ಮಾಡೆಲ್ ಹೈಸ್ಕೂಲ್ , ಉಷಾತಾಯಿ ಗೋಗಟೆ ಶಾಲೆ, ಘೋಟಗೆ ಶಾಲೆ, ಎನ್.ಎಸ್. ಪೈ ಶಾಲೆ ಸೇರಿದಂತೆ ಅನೇಕ ಮಹಾವಿದ್ಯಾಲಯಗಳನ್ನು ಹೊಂದಿದೆ. ಡಿಸೆಂಬರ್ 20 ರಿಂದ 26 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ಸಂಸದರಾದ ತೇಜಸ್ವಿ ಸೂರ್ಯ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಸಂಸದ ಜಗದೀಶ್ ಶೆಟ್ಟರ್,
ಸಚಿವರಾದ ಕೃಷ್ಣಭೈರೆಗೌಡ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಅಭಯ್ ಪಾಟೀಲ್. ಆಸೀಫ್ ಸೇಠ್, ಡಾ. ಗುರುರಾಜ್ ಕರಜಗಿ, ಚಲನಚಿತ್ರದ ನಾಯಕರಾದ ಸಚಿನ್ ಪೀಳಗಾಂವಕರ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಗಿರೀಶ್ ಓಕ್ ಸೇರಿದಂತೆ ಇನ್ನುಳಿದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಶಿವಣಗಿ, ಸುಧೀರ್ ಕುಲಕರ್ಣಿ, ಕೃಷ್ಣಕುಮಾರ್ ಪೈ, ಶೈಲಜಾ ಚಾಟೆ, ಎಸ್.ಎನ್. ಜೋಷಿ, ಅರವಿಂದ ಗಂಗೂರ್ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7