ರಾಯಬಾಗದಲ್ಲಿ ಕೆರೆ ತುಂಬಿಸುವ ಯೋಜನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ
ಹಳೆ ದಿಗ್ಗೇವಾಡಿ ಮತ್ತು ಇಂಗಳಿ ನಡುವೆ ಬ್ರಿಡ್ಜ್ ಕಮ್ ಬಾಂದರಾ ನಿರ್ಮಿಸಲು ಸಚಿವರಿಗೆ ಗ್ರಾಮಸ್ಥರ ಮನವಿ
ರಾಯಬಾಗದಲ್ಲಿ ಕೆರೆ ತುಂಬಿಸುವ ಯೋಜನೆ
ಸಚಿವ ಸತೀಶ್ ಜಾರಕಿಹೊಳಿ ಚಾಲನೆ
ಹಳೆ ದಿಗ್ಗೇವಾಡಿ ಮತ್ತು ಇಂಗಳಿ ನಡುವೆ ಬ್ರಿಡ್ಜ್ ಕಮ್ ಬಾಂದರಾ ನಿರ್ಮಿಸಿ
ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ
ರಾಯಬಾಗ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಸಾಂಕೇತಿಕವಾಗಿ ಚಾಲನೆಯನ್ನು ನೀಡಿದರು.
ರಾಯಬಾಗ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಸಾಂಕೇತಿಕವಾಗಿ ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ಸವದತ್ತಿ, ನಸಲಾಪೂರ ಹಾಗೂ ದಿಗ್ಗೇವಾಡಿ ಗ್ರಾಮದ ಜನರು ಹಳೆ ದಿಗ್ಗೇವಾಡಿ ಮತ್ತು ಇಂಗಳಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ರಿಡ್ಜ್ ಕಮ್ ಬಾಂದರ ಕಾಮಗಾರಿಯು ಸುಮಾರು ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿ ಬಾಕಿ ಉಳಿದಿದೆ. ಬೇಸಿಗೆಯ ಕಾಲದಲ್ಲಿ ಕೃಷ್ಣಾ ನದಿಯ ನೀರು ಸಂಪೂರ್ಣ ಬತ್ತಿಹೋಗುವದಿರಿಂದ ಇಲ್ಲಿನ ಸುತ್ತಮುತ್ತ ಇರುವ ಗ್ರಾಮಸ್ಥರಿಗೆ ಜಾನುವಾರಗಳಿಗೆ ನೀರಿನ ಹಾಹಾಕಾರ ಉಂಟಾಗುತ್ತಿದೆ ಎಂದು ತಿಳಿಸಿದರು. ಹಳೆ ದಿಗ್ಗೇವಾಡಿ ಮತ್ತು ಇಂಗಳಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ರಿಡ್ಜ್ ಕಮ್ ಬಾಂದರ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಬಾವನ ಸವದತ್ತಿ, ನಸಲಾಪುರ, ದಿಗ್ಗೇವಾಡಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಸುಮಾರು 7 ವರ್ಷದಿಂದ ಕಾಮಗಾರಿ ಆರಂಭಗೊಂಡಿದ್ದು, ಇಂದು ಪೂರ್ಣಗೊಂಡಿದ್ದು, ನೀರು ತುಂಬಿಸುವ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದ್ದು, ಮುಂದೆ ಸಿಎಂ ಮತ್ತು ಸಂಬಂಧಿಸಿದ ಸಚಿವರ ಉಪಸ್ಥಿತಿಯಲ್ಲಿ ಲೋಕಾರ್ಪಣಗೊಳಿಸಲಾಗುವುದು. ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಹಲವಾರು ಸಮಸ್ಯೆಗಳು ಎದುರಾಗಿದ್ದವು. ಸಂಸದರು, ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಮುತುವರ್ಜಿ ವಹಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈಗ ಯಾವುದೇ ಸಮಸ್ಯೆಯಿಲ್ಲದೇ, ಆರಂಭಗೊಂಡಿದ್ದು, ಎಲ್ಲ ಕೆರೆಗಳನ್ನು ಇಂದಿನಿಂದಲೇ ತುಂಬಿಸಿ ರೈತರ ಹಿತವನ್ನು ಕಾಯಲಾಗುವುದು.
ಇನ್ನು ದಿಗ್ಗೇವಾಡಿ ಸೇತುವೆ ಕುಸಿತಗೊಂಡಿದ್ದು, ಅದನ್ನು ಸರಿಪಡಿಸಲಾಗುವುದು. ಇನ್ನು ಕೃಷ್ಣಾ ಕಿತ್ತೂರಿನಿಂದ ಖೇಮಲಾಪೂರದವ ವರೆಗೆ 70 ಕೋಟಿ ರೂಪಾಯಿಯಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಯತ್ನಿಸಲಾಗುತ್ತಿದೆ. ರಾಯಬಾಗ ರಿಂಗರೋಡ್ ಕೂಡ ಅಂತಿಮ ಹಂತದಲ್ಲಿದೆ. ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಉಳಿದ ಯೋಜನೆಗಳನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಬೈಟ್
ಈ ಸಂದರ್ಭದಲ್ಲಿ ಸವದತ್ತಿ, ನಸಲಾಪುರ, ದಿಗ್ಗೇವಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7