Breaking News

ಅರಿಹಂತ ಕಾರ್ಖಾನೆಯಿಂದ ಟನ್ ಕಬ್ಬಿಗೆ 3350 ರೂಪಾಯಿ ದರ, ಮಾಲಿಕರಿಗೆ ರೈತರಿಂದ ಸನ್ಮಾನ

Spread the love

ಚಿಕ್ಕೋಡಿ:ಜೈನಾಪುರದ ಅರಿಹಂತ ಶುಗರ್ ಇಂಡಸ್ಟ್ರೀಸ್ ವತಿಯಿಂದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಭಿನಂದನ ಪಾಟೀಲ ಮತ್ತು ಯುವ ನಾಯಕ ಉತ್ತಮ ಪಾಟೀಲ ಕಳೆದ 7 ವರ್ಷಗಳಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ.
May be an image of one or more people, dais and text
ಬಯೋ ಪ್ರಾಡಕ್ಟ್ ಉತ್ಪನ್ನವಿಲ್ಲದಿದ್ದರೂ ಪ್ರಸ್ತುತ ಹಂಗಾಮಿನಲ್ಲಿ ಪ್ರತಿ ಟನ್‌ಗೆ 3350 ರೂ. ಕಬ್ಬಿನ ಬೆಲೆ ನೀಡಿ ರೈತರ ಹಿತಾಸಕ್ತಿ ಕಾಪಾಡಿದ್ದಾರೆ ಎಂದು ಸ್ವಾಭಿಮಾನಿ ರೈತ ಸಂಘಟನೆಯ ನಾಯಕ ರಾಜು ಖಿಚಡೆ ಹೇಳಿದರು.
ಬೋರಗಾಂವ ಪಟ್ಟಣದಲ್ಲಿ ಸ್ವಾಭಿಮಾನಿ ಶೇತಕರಿ ಸಂಘಟನಾ ಮತ್ತು ಕರ್ನಾಟಕ ರಾಜ್ಯ ರೈತ ಸಂಘದಿಂದ ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದರು.May be an image of one or more people
ಕಾರಖಾನೆ ಮುಖ್ಯಸ್ಥ ಉತ್ತಮ ಪಾಟೀಲ ಮಾತನಾಡಿ, ಅರಿಹಂತ ಉದ್ಯೋಗ ಸಮೂಹ ಮೂಲಕ ರೈತರ ಅಭಿವೃದ್ಧಿ ಮಾಡಲಾಗುತ್ತಿದೆ. ಅರಿಹಂತ ಸಕ್ಕರೆ ಕಾರ್ಖಾನೆಯ ಮೂಲಕ ರೈತರಿಗೆ ಸರಿಯಾದ ಬೆಲೆ. ಸರಿಯಾದ ತೂಕ ಮತ್ತು ಕಡಿಮೆ ಬೆಲೆಯಲ್ಲಿ ಸಕ್ಕರೆ ಒದಗಿಸುತ್ತಿದ್ದೇವೆ
.
ನಾವು ರೈತರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದೇವೆ. ಈ ವರ್ಷ ಅತಿಯಾದ ಮಳೆ ಹಾಗೂ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದರೂ ಇದನ್ನು ಆರಿತು ನಾವು ಕಬ್ಬಿಗೆ ಪ್ರತಿ ಟನ್ನಿಗೆ 3,350 ಬೆಲೆ ನಿಗದಿ ಮಾಡಿದ್ದೇವೆ ಎಂದರು. ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ದರಿಖಾನ ಅಜ್ಜವರು ಅಭಿನಂದಿಸಿದರು.May be an image of one or more people
ಈ ಸಂದರ್ಭದಲ್ಲಿ ಪಂಕಜ ತಿಪ್ಪಣ್ಣವರ, ರಮೇಶ ಪಾಟೀಲ, ತಾತ್ಯಾಸಾಬ ಕೇಸ್ತೆ, ತಾತ್ಯಾಸಾಹೇಬ ಪಾಟೀಲ, ಶೀತಲ ಬಾಗೆ, ಸುಭಾಷ ಚೌಗುಲೆ, ತಾತ್ಯಾಸಾಹೇಬ ಬಸಣ್ಣವರ. ಅಭಿನಂದನ ಫಿರಂಗಣ್ಣನವರ, ರಮೇಶ ಮಾಲಗಾವೆ, ಪ್ರಕಾಶ ತಾರದಾಳೆ. ಪೋಪಟ ಪಾಟೀಲ, ಬಂಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿಯ ಡಾ. ಸಾರಂಗ್ ಶೆಠೆ ಅವರಿಗೆ ರಾಷ್ಟ್ರ ಮಟ್ಟದ NAMS ಗೌರವ

Spread the love ಬೆಳಗಾವಿಯ ಡಾ. ಸಾರಂಗ್ ಶೆಠೆ ಅವರಿಗೆ ರಾಷ್ಟ್ರ ಮಟ್ಟದ NAMS ಗೌರವ ಭಾರತದ ಮೂವರು ಅಸ್ಥಿಶಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ