Breaking News

ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ: ಪ್ರಕಾಶ ಹುಕ್ಕೇರಿ

Spread the love

ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ: ಪ್ರಕಾಶ ಹುಕ್ಕೇರಿ
ಚಿಕೋಡಿ: ಚಿಕ್ಕೋಡಿ-ಸದಲಗಾ
ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 4 ಕೋಟಿ ರೂ ಅನುದಾನವನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು.May be an image of one or more people and dais
ಯಕ್ಸಂಬಾ ಪಟ್ಟಣದ ಗೃಹ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಸಿಎಂ ಸಿದ್ದರಾಮ ಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ವಿವಿಧ ಸಚಿವರು ಅನುದಾನಮಂಜೂರು ಮಾಡಿದ್ದಾರೆ ಎಂದರು.
ಇಂಗಳಿ ಗ್ರಾಮದ ಮರಾಠ ಸಮಾಜ ಯಾತ್ರಿ ನಿವಾಸ ತಡೆಗೋಡೆ ನಿರ್ಮಾಣಕ್ಕೆ 1 ಕೋಟಿ ರೂ., ಪೇವರ್‌ರಸ್ತೆ ಮತ್ತು ಕಟ್ಟಡ ಬಣ್ಣ ಹಚ್ಚುವ ಕಾರ್ಯಕ್ಕೆ 20 ಲಕ್ಷ ಮಂಜೂರಾಗಿದ್ದು, ಈ ವರ್ಷ ಮರಾಠ ಸಮಾಜಕ್ಕೆ ಒಟ್ಟಾರೆ 1.20 ಕೋಟಿ ರೂ. ಅನುದಾನ ಲಭಿಸಿದೆ ಎಂದರು.
ಕಲ್ಲೋಳ-ಯಡೂರ ನೂತನ ಬ್ಯಾರೇಜ್ ಗೆ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ರೇಲಿಂಗ್ ನಿರ್ಮಾಣ ಮತ್ತು ಬ್ಯಾರೇಜ್‌ನಿಂದ ಮಿರ್ಜಿ ಪೂಜಾರಿ ತೋಟದವರೆಗೆ ರಸ್ತೆ ಸುಧಾರ ಣೆಗೆ 65 ಲಕ್ಷ ರೂ. ಮಂಜೂರಾಗಿದೆ. ನೇಜ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಯಿಂದ ಚಂದ್ರವ್ವತಾಯಿ ಗುಡಿಯವರೆಗೆ ರಸ್ತೆಗೆ 1 ಕೋಟಿ ರೂ., ಮನೂಚವಾಡಿ ಗ್ರಾಮದ ರಸ್ತೆ ಸುಧಾರಣೆಗೆ 1 ಕೋಟಿ ರೂ.ಮಂಜೂರಾಗಿದೆ.
ಎಲ್ಲ ಕಾಮಗಾರಿ ಗಳಿಗೆಶೀಘ್ರದಲ್ಲೇ ಟೆಂಡರ್‌ಕರೆಯಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
*ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲೆಗಳಿಗೆ 35 ಲಕ್ಷ ರೂಪಾಯಿ
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ 2025-26 ನೇ ಸಾಲಿನಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ಅನುದಾನಿತ
ಪ್ರಾಥಮಿಕ/ಪ್ರೌಢ ಶಾಲೆಗಳ ಕಾಮಗಾರಿಗಳಿಗೆ 35 ಲಕ್ಷ ಅನುದಾನ ಮಂಜೂರಾಗಿದೆ. ಶ್ರೀ ಶಿವಯೋಗೀಶ್ವರ ಹಿ.ಪ್ರಾ./ಪ್ರೌಢ ಶಾಲೆ, ಇಂಚಲ ಶಾಲಾ ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ., ಬೈಲಹೊಂಗಲದ ಶೂರ ಸಂಗೊಳ್ಳಿ ರಾಯಣ್ಣ ಬಾಲಕರ ಪ್ರೌಢ ಶಾಲೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 10 ಲಕ್ಷರೂ. ಕಲ್ಲೇಶ್ವರ ಶಿಕ್ಷಣ ಸಂಸ್ಥೆ ಮಣ್ಣೂರ ಪ್ರೌಢ ಶಾಲೆ ಶಾಲೆ ಕಾಂಪೌಂಡ್ ಗೋಡೆ, ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ..
ಬೈಲಹೊಂಗಲದ ಶ್ರೀ ಮರಡಿ ಬಸವೇಶ್ವರ ಬಾಲಕರ ಪ್ರೌಢ ಶಾಲೆ ವಿಜ್ಞಾನ ಪ್ರಯೋಗಾಲಯ ಕೊಠಡಿ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪ್ಪಾಸಾಹೇಬ ಜತ್ರಾಟೆ,ಗಣಪತಿ ಧನವಡೆ,ವಸಂತ ಮಾನೆ,ರಾಜಾರಾಮ ಮಾನೆ,ರಮೇಶ ಮುರಚಟ್ಟೆ,ಚಂದ್ರಕಾಂತ ಲಂಗೂಟೆ,ಅಪ್ಪಸಾಹೇಬ ಸರಡೆ,ಶಿವಾಜಿ ಪವಾರ,ರವೀಂದ್ರ ಮದಭಾವೆ,ಅರುಣ ಪಾಟೋಳೆ, ಹೂವನ್ನಾ ಚೌಗಲೆ,ಮೋಹನ‌ ಪಾಟೋಳೆ, ಅಪ್ಪಾಸಾಹೇಬ ಗೋಸರವಾಡೆ,ಸುಭಾಷ ಉನ್ಹಾಳೆ,ಸಿದ್ರಾಮ ಅಪರಾಜ,ಸಂಜಯ ಮಾನೆ,ಸಂಜಯ ಕುಡಚೆ,ಅಜೀತ ಚಿಗರೆ,ರಾಮಜೀ ಕಾಂಬಳೆ,ಅಣ್ಣಾಸಾಹೇಬ ದೇಸಾಯಿ ಬಾಬು ಪಾಟೋಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ರಾಜ್ಯಪಾಲರ ಭಾಷಣದ ಮೊದಲ 11 ಪ್ಯಾರಾಗಳಲ್ಲಿ ವಿಬಿ ಜಿ ರಾಮ್​ ಜಿ ಕಾಯ್ದೆ ಟೀಕಿಸಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ

Spread the loveಬೆಂಗಳೂರು : ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷದ ಮಧ್ಯೆ ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಲಾಯಿತು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ