ಅಂಜುಮನ್ ಕಾಲೇಜಿನಿಂದ ಯುವಶಕ್ತಿ ಮತದಾನ ಜಾಗೃತಿ ಅಭಿಯಾನ
ಯುವಶಕ್ತಿಯಿಂದ ಮತದಾನ ಜಾಗೃತಿ ಅಭಿಯಾನ
ಅಂಜುಮನ್ ಪಿ ಯು ಸಿ ಮತ್ತು ಐಟಿಐ ವಿದ್ಯಾರ್ಥಿಗಳಿಂದ ಜಾಗೃತಿ
ನಾಗರಿಕರ ಹಕ್ಕು ಮತ್ತು ಮತದ ಮೌಲ್ಯವನ್ನು ಜನರಿಗೆ ತಿಳಿಸುವ ಗುರಿ
ಸಮರ್ಥ ಸರ್ಕಾರ ರಚನೆಯಾದರೆ ದೇಶದ ಭವಿಷ್ಯ ಉಜ್ವಲ; ಡಾ. ಹೆಚ್ ಐ ತಿಮ್ಮಾಪೂರ
ಬೆಳಗಾವಿ: ದೇಶದ ಭವಿಷ್ಯವನ್ನು ಉತ್ತಮಗೊಳಿಸುವ ಸದುದ್ದೇಶದಿಂದ, ಅಂಜುಮನ್ ಪಿಯು ಮಹಾವಿದ್ಯಾಲಯ ಹಾಗೂ ಅಂಜುಮಾನ್ ಐಟಿಐ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಗ್ಗೂಡಿ ಮತದಾನ ಆಯೋಗ ವನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಅಂಜುಮನ್ ಪಿಯು ಮಹಾವಿದ್ಯಾಲಯ ಹಾಗೂ ಅಂಜುಮಾನ್ ಐಟಿಐ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಗ್ಗೂಡಿ ಮತದಾನ ಆಯೋಗ ವನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಇತ್ತೀಚೆಗೆ ಸರ್ಕಾರಿ ಆದೇಶದ ಮೇರೆಗೆ ದೇಶಾದ್ಯಂತ ಆರಂಭವಾಗಿರುವ ಈ ಮಹತ್ವದ ಅಭಿಯಾನದಲ್ಲಿ, ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಭಾಗವಹಿಸಿದ್ದಾರೆ. ‘ಪ್ರಜೆಗಳೇ ಪ್ರಭುಗಳು’ ಎಂಬ ಆಶಯವನ್ನು ಹೊತ್ತು, ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಮತದ ಮೌಲ್ಯವನ್ನು ಜನರಿಗೆ ತಿಳಿಸುವ ಗುರಿ ಹೊಂದಲಾಗಿದೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಈ ಅಭಿಯಾನದ ಮೂಲಕ ಒಂದು ಸ್ಪಷ್ಟ ಸಂದೇಶವನ್ನು ಸಾರುತ್ತಿದ್ದಾರೆ:
“ಒಳ್ಳೆಯ ದೇಶ ನಿರ್ಮಾಣವಾಗಬೇಕಾದರೆ, ಮೊದಲು ಉತ್ತಮ ನಾಗರಿಕರು ಸೃಷ್ಟಿಯಾಗಬೇಕು. ಉತ್ತಮ ನಾಗರಿಕರು, ವಿವೇಕಯುತ ಮತದಾನ ಮಾಡುತ್ತಾರೆ. ಅಂತಹ ಮತದಾನದಿಂದ ಉತ್ತಮ ಧುರೀಣರು ಆಯ್ಕೆಯಾಗಿ, ಸಮರ್ಥ ಸರ್ಕಾರ ರಚನೆಯಾಗುತ್ತದೆ ಮತ್ತು ದೇಶದ ಭವಿಷ್ಯ ಉಜ್ವಲವಾಗುತ್ತದೆ ಅಂಜುಮಾನ್ ಕಾಲೇಜ ಪ್ರಾಧ್ಯಾಪಕ ಡಾ. ಎಚ್. ಐ ತಿಮ್ಮಾಪೂರ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ಧರು.
Laxmi News 24×7