ಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲಲ್ಲ (Parappana Agrahara Jail) ಐಷಾರಾಮಿ ರೆಸಾರ್ಟ್! ಐಸಿಸ್ ಉಗ್ರ ಜುಹಾದ್, ವಿಕೃತ ಕಾಮಿ ಉಮೇಶ್ ರೆಡ್ಡಿ, ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಜೈಲು ಸೇರಿದ ತೆಲುಗು ನಟ ತರುಣ್ ಇವರೆಲ್ಲ ಜೈಲಿನಲ್ಲಿ ಬಿಂದಾಸ್ ಆಗಿದ್ದಾರೆ. ಇವರು ಜಾಲಿ ಲೈಫ್ ಮಾಡುತ್ತಿರುವುದಕ್ಕೆ ಸಂಬಂಧಿಸಿದ ವೈರಲ್ ಆಗಿರುವ ವಿಡಿಯೋಗಳು ಸರ್ಕಾರವನ್ನೇ ನಡುಗಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಜೈಲಧಿಕಾರಿಗಳು, ಜೈಲಿನ ಎಲ್ಲಾ ಬ್ಯಾರಕ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಜೈಲಿನ ಸಿಬ್ಬಂದಿ ತಲಾಶ್ ನಡೆಸಿದ್ದಾರೆ. ಆದರೆ, ಯಾವುದೇ ರೀತಿಯ ವಸ್ತುಗಳು ಪತ್ತೆಯಾಗಿಲ್ಲ.

ಜೈಲು ಸಿಬ್ಬಂದಿಯಿಂದಲೇ ದಾಳಿ ಮಾಹಿತಿ ಲೀಕ್?
ಕೆಲ ಸಿಬ್ಬಂದಿಯೇ ಜೈಲಧಿಕಾರಿಗಳ ದಾಳಿ ಬಗ್ಗೆ ಕೈದಿಗಳಿಗೆ ಮಾಹಿತಿ ಲೀಕ್ ಮಾಡಿದ್ದು, ಅವರೆಲ್ಲ ಎಚ್ಚೆತ್ತುಕೊಂಡಿದ್ದರು. ಹೀಗಾಗಿ ಹುಡುಕಾಟ ನಡೆಸಿದರೂ, ಏನು ಸಿಕ್ಕಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ವಿಡಿಯೋ ವೈರಲ್ ಆದ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಅವುಗಳೆಲ್ಲ 2023ರ ವಿಡಿಯೋ ಎಂದು ಡಿಐಜಿ ಆನಂದ್, ಎಡಿಜಿಪಿ ದಯಾನಂದ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ, ವೈರಲ್ ಆದ ವಿಡಿಯೋಗಳ ಅಸಲಿಯತ್ತು ಬೇರೆಯೇ ಇದೆ.

2025 ರ ನವೆಂಬರ್ 6 ರ ವಿಡಿಯೋ!
ವಿಡಿಯೋದಲ್ಲಿ ಕಾಣಿಸಿರುವ ಪತ್ರಿಕೆಯ ಚಿತ್ರವು ವಿಡಿಯೋ ಯಾವ ವರ್ಷದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. 2025 ರ ನವೆಂಬರ್ 6 ರ ನ್ಯೂಸ್ ಪೇಪರ್ ಶನಿವಾರ ವೈರಲ್ ಆದ ವಿಡಿಯೋದಲ್ಲಿ ಕಾಣಿಸಿದೆ. ಜೈಲಧಿಕಾರಿಗಳು ಇದನ್ನೂ ಗಮನಿಸದೇ 2023ರ ವಿಡಿಯೋ ಎಂದು ವರದಿ ನೀಡಿದ್ದಾರೆ!
Laxmi News 24×7