Breaking News

ಸಮಾರಂಭದಲ್ಲಿ ಸುಮಾರು 5 ಲಕ್ಷ ಭಕ್ತಾದಳಿಗೆ ರೊಟ್ಟಿ ಪುರೈಕೆ.

Spread the love

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಶ್ರೀ ಕೆರಿ ಸಿದ್ದೇಶ್ವರ ದೇವರ ಪೋವಳಿ ವಾಸ್ತು ಶಾಂತಿ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮ ಭಕ್ತಾದಿಗಳಿಗೆ ಅನ್ಪ್ರಸಾದಕ್ಕಾಗಿ ಐನಾಪುರದ ಮನೆ ಮನೆಯಿಂದ ಏಳು ಲಕ್ಷ ರೊಟ್ಟಿ ಹಾಗೂ ವನ ಕಾಯಿ ಪಲ್ಯ ತೆಗೆದುಕೊಂಡು ಮಂದಿರಕ್ಕೆ ಆಗಮಿಸುತ್ತಿದ್ದರಿಂದ ಭಕ್ತಿಮಯ ವಾತಾವರಣ ವ್ಯಕ್ತವಾಗುತ್ತಿದೆ.
ಕವಲಗುಡ್ಡದ ಸಿದ್ದಾಶ್ರಮ ಆಶೀರ್ವಾದ ಶ್ರೀ ಅಮರೇಶ್ವರ ಮಹಾರಾಜರ ರಿಂದ 28 ಅಕ್ಟೋಬರ್ ರಿಂದ ನೋವೆಂಬರ್ 7 ರವರಿಗೆ ಹತ್ತು ದಿನ ಪ್ರತಿ ದಿನ ಸಂಜೆ ಸಿದ್ದರ ಚರಿತ್ರಾಮೃತ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಸ್ವಾಮೀಜಿಗಳ ಸಂದೇಶ ಮೇರೆಗೆ ಭಕ್ತರ ದಂಡ ಹರಿದು ಬರುತ್ತಿದೆ.
ರವಿವಾರ ದಿನಾಂಕ 09 ರಂದು ಇಡೀ ರಾಜ್ಯದಿಂದ 46 ದೇವರ ಪಲ್ಲಕ್ಕಿ ಭೇಟಿ ಕಾರ್ಯಕ್ರಮ ಇಲ್ಲಿಗೆ ನೆರವೇರಲಿದೆ.
ಸೋಮವಾರ ಹತ್ತಿರರಂದು ಪೊವಳಿ ವಾಸ್ತು ಶಾಂತಿ ಕಾರ್ಯಕ್ರಮ. ಪೂಜಾ ಹೋಮ ಬೆಳಗ್ಗೆ 6 ಗಂಟೆಯಿಂದ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ ಆರು ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ,
ಬುಧವಾರ ದಿನಾಂಕ ೧೧ ರಂದು ನಸುಕಿನ ನಾಲ್ಕು ಗಂಟೆಗೆ ಮಲಕಾರ ಸಿದ್ದ ದೇವರ ಮಂದರೂಪ ಆಡುವನು ಈ ವಿಶೇಷ ಭಕ್ತಿ ಕಾರ್ಯಕ್ರಮ ಜರಗಲಿದೆ, ಮಧ್ಯಾಹ್ನ ದೇವರ ಅಗಲುವ ಭೇಟಿ ಕಾರ್ಯಕ್ರಮ ನೆರವೇರಲಿದೆ. ಎಂದು ಅಮರೇಶ್ವರ ಮಹಾರಾಜರು ಹೇಳಿದರು.
ಸದ್ಭಕ್ತರ ನೀಡುತ್ತಿರುವ ಬೆಂಬಲ ಹಾಗೂ ಭಕ್ತಿ ಬಗ್ಗೆ ಮಾಹಿತಿ ನೀಡುವಾಗ ಐನಾಪುರ ಪಟ್ಟಣದಲ್ಲಿ ಸಿದ್ದ ಮಹಾತ್ಮೆ ಮತ್ತಷ್ಟು ಎದ್ದು ಕಾಣುತ್ತಿದೆ ಇಲ್ಲಿಯ ಭಕ್ತರು ವಾದ್ಯದ ಮುಖಾಂತರ ಬುದ್ಧಿಗಳನ್ನು ಕಟ್ಟಿಕೊಂಡು ಮಂದಿರಕ್ಕೆ ಬಂದು ಆಹಾರ ಧಾನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಇದರ ವಿಶೇಷತೆ ಅಂದರೆ ಪ್ರತಿಯೊಬ್ಬ ಬಡವನಿಗೆ ಹೊಟ್ಟೆ ತುಂಬ ಅನ್ನ ನೀಡುವುದು ಸಂಕಲ್ಪ ಈಗಾಗಲೇ ಐನಾಪುರ್ ಪಟ್ಟಣದಿಂದ ಲಕ್ಷಾಂತರ ರೋಟ್ಟಿ, ಶೇಂಗಾ ಚಟ್ನಿ, ಹಸಿ ತರಕಾರಿಗಳು, ಬೆಲ್ಲ, ಸಕ್ಕರೆ, ಅಕ್ಕಿ, 20 ಕ್ವಿಂಟಲ್ ಶೇಂಗಾ ದಾನವಾಗಿ ನೀಡುತ್ತಿದ್ದಾರೆ, ಈ ವೈಭವ ಇನ್ನಷ್ಟು ಎದ್ದು ಕಾಣುತ್ತಿದೆ ಎಂದು ಅಂಬರೀಶ್ ಅವರ ಮಹಾರಾಜರು ಹೇಳಿದರು.
ಐನಾಪುರದ ವಿಠಲ ಮಂದಿರ ಹಾಗೂ ಜ್ಯೋತಿರ್ಲಿಂಗ ಮಂದಿರದ ಪರಿಸರದಲ್ಲಿಯ ಸಾವಿರಾರು ಮಹಿಳಾ ಭಕ್ತರು ಬೆಳಿಗ್ಗೆಯಿಂದ ರೊಟ್ಟಿ ತಯಾರಿಸಿ ವಾದ್ಯದೊಂದಿಗೆ ಮಂದಿರಕ್ಕೆ ಆಗಮಿಸಿ ದೇವಾಲಯದಲ್ಲಿ ಹಸ್ತಾನತ್ತರಿಸಿದರು.
ಸಿದ್ದೇಶ್ವರ ಮಂದಿರದ ಟ್ರಸ್ಟಿ ಸದಸ್ಯರು ಭಕ್ತರು ಪಾಲ್ಗೊಂಡಿದ್ದಾರೆ.

Spread the love

About Laxminews 24x7

Check Also

ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ

Spread the loveಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ತನ್ನ ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ ಹಾಗೂ ವ್ಯಕ್ತಿಗೆ ಅಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ