ಹುಬ್ಬಳ್ಳಿ ತಾ. ಗಾಮನಗಟ್ಟಿಯಲ್ಲಿ ಅದ್ದೂರಿಯಾಗಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ… ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಭಾಗಿ.
ಆದಿ ಕವಿ, ಮೊದಲ ಕವಿ ಸೇರಿ ರಾಮಾಯಣ ಪಿತಾಮಹ ಹಾಗೂ ವಾಲ್ಮೀಕಿ ಸಮಾಜ ಸೇರಿದಂತೆ ಹಿಂದೂಗಳ ಆರಾಧ್ಯ ದೈವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು, ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಗ್ರಾಮದ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರು ಒಟ್ಟಾಗಿ ಅರ್ಥಪೂರ್ಣವಾಗಿ ಜಯಂತಿ ಆಚರಣೆ ಮಾಡಿದರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದ ವಾಲ್ಮೀಕಿ ಸಮಾಜದ ಯುವಕರು ಹಿರಿಯರು ಸೇರಿಕೊಂಡು, ವಾಲ್ಮೀಕಿ ಮಹರ್ಷಿಯ ಮೂರ್ತಿಗೆ ಶ್ರದ್ಧಾ ಭಕ್ತಿಯಿಂದ ಎಲ್ಲರೂ ಒಟ್ಟಾಗಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಬಂದ ಭಕ್ತರಿಗೆ ಅನ್ನಪ್ರಸಾದದ ಸೇವೆ ಮಾಡಿದರು.
ನಂತರ ಊರಿನ ಪ್ರಮುಖ ಬಿದಿಗಳಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಯನ್ನು ಮೆರವಣಿಗೆ ಮಾಡಿದರು. ಇನ್ನು ಮೆರವಣಿಗೆ ಮುಂದೆ ಡೊಳ್ಳು ಕುಣಿತ,ಚಿಕ್ಕ ಮಕ್ಕಳ ಕೋಲಾಟ, ಜಾಂಜ್ ಮೇಳ, ಮಹಿಳೆಯರ ಡೊಳ್ಳು ಕುಣಿತ ಹಲವಾರು ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿದರು. ಶಾಸಕ ಅರವಿಂದ ಬೆಲ್ಲದ ಡೊಳ್ಳು ಬಾರಿಸಿ ಸಂಭ್ರಮಿಸುವುದರ ಜತೆಗೆ ಜಯಂತಿ ಮರವಣಿಗೆ ಮೇರಗು ತಂದಿತ್ತು. ಜತೆಗೆ ಮೆರವಣಿಗೆಯಲ್ಲಿ ಯುವತಿರು ಆರತಿ ಹಿಡಿದು ಸಾಗಿರುವುದು ಎಲ್ಲರ ಗಮನ ಸೆಳೆಯಿತು.