ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೀರಜ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ…
– ಸಾಂಗ್ಲಿ ಜಿಲ್ಲೆಯ ಮೀರಜ್‌ನ 16 ವರ್ಷದ ಬಾಲಕನೊಬ್ಬ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದ.
ಈ ಘಟನೆಯಿಂದಾಗಿ ಮಿರಜ್‌ನ ಶಾಸ್ತ್ರಿ ಚೌಕ್‌ನಲ್ಲಿ ಜನಸಮೂಹ ಜಮಾಯಿಸಿತು. ಇದರ ಮದ್ಯ ರಾಜಕೀಯ ನಾಯಕರ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ. ಭಾವನೆಗಳಿಗೆ ಧಕ್ಕೆ ತಂದ ಹುಡುಗನ ಮನೆಗೆ ಕೆಲವರು ಮೆರವಣಿಗೆ ನಡೆಸಿದ್ದರು.
ಪೊಲೀಸರು ಗುಂಪುಗರ್ಷಣೆ ಚದುರಿಸಲು ಧಾವಿಸಿದರು
ಮತ್ತು ಸಮುದಾಯವು ಪೊಲೀಸ್ ಠಾಣೆ ಆವರಣದಲ್ಲಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ
. ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಘುಗೆ ಗುಂಪನ್ನು ಸಮಾಧಾನಪಡಿಸಿದರು ಮತ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ಕೊಟ್ಟಿದ್ದರು
. ಈಗ ಉದ್ವಿಗ್ನತೆ ಸಂಪೂರ್ಣವಾಗಿ ಕಡಿಮೆಯಾಗಿದೆ. ವದಂತಿಗಳನ್ನು ನಂಬಬೇಡಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೂಡ ಮನವಿ ಮಾಡಿದ್ದಾರೆ.