ಬೆಳಗಾವಿ :ಶಾಲೆ ಶುಲ್ಕದ ಹೊರೆ ಇಳಿಸಿ, ಪಾಲಕರು, ಮಕ್ಕಳನ್ನು ಉಳಿಸಿ ಜಿಲ್ಲಾಧಿಕಾರಿ ಮೊರೆ ಹೋದ ಖಾಸಗಿ ಶಾಲೆ ಪಾಲಕರು
ಅರ್ಧ ಶೈಕ್ಷಣಿಕ ವರ್ಷ ಮುಗಿದುಹೋಗಿದೆ. ಕೊರೋನಾ ಸಂಕಷ್ಟದಿಂದ ಪಾಲಕರೂ ತೊಂದರೆಯಲ್ಲಿ ಸಿಲುಕಿದ್ದಾರೆ. ಪಾಠಗಳೂ ನಡೆಯುತ್ತಿಲ್ಲ. ಹಾಗಾಗಿ ಶಾಲೆ ಶುಲ್ಕದಲ್ಲಿ ರಿಯಾಯಿತಿ ನೀಡಲು ಸೂಚನೆ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ ತಾಲೂಕು ಯಮನಾಪುರ ಗ್ರಾಮದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.: ಕೊರೋನಾದಿಂದಾಗಿ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಮಕ್ಕಳ ಶಾಲೆ ಶುಲ್ಕ ಭರಿಸಲೂ ತೊಂದರೆಯಾಗಿದೆ. ಹೀಗಾಗಿ ಶಾಲೆ ಶುಲ್ಕ ಕಡಿಮೆ ಮಾಡಬೇಕು. ಪಾಲಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಬೆಳಗಾವಿ ತಾಲೂಕು ಯಮನಾಪುರ ಗ್ರಾಮದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಯಿಯೊಬ್ಬರು ಮಾತನಾಡಿ, ಶಾಲೆ ಶುಲ್ಕ ಪೂರ್ತಿ ವಸೂಲಿ ಬೇಡ ಎಂದು ಮನವಿ ಮಾಡಿದ್ದೆವು. ಆದರೆ ಸ್ಪಂದಿಸುತ್ತಿಲ್ಲ. ಯಮನಾಪುರದ ಬೆನನ್‍ಸ್ಮಿತ್ ಶಾಲೆಯ ಆಡಳಿತ ಮಂಡಳಿ ಶುಲ್ಕ ಕಡಿಮೆ ಮಾಡಲು ಒಪ್ಪುತ್ತಿಲ್ಲ. ದಯಮಾಡಿ ಶಾಲೆ ಶುಲ್ಕ ಕಡಿಮೆ ಮಾಡಿ ಮಕ್ಕಳ ಭವಿಷ್ಯ ರೂಪಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದೇವೆ ಎಂದರು.
ಇನ್ನೊರ್ವ ಪಾಲಕರು ಮಾತನಾಡಿ, ಶಾಲೆ ಶುಲ್ಕ ಕಡಿಮೆ ಮಾಡಬೇಕು ಎಂದು ಬೆನನ್ ಸ್ಮಿತ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆಡಳಿತಕ್ಕೆ ಮನವಿ ಮಾಡಿದ್ದೆವು. ಆದರೆ ಅವರು ಕೇಳುತ್ತಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಬಂದಿದ್ದೇವೆ ಎಂದರು.
ಬೆನನ್ ಸ್ಮಿತ್ ಶಾಲೆಗೆ ಮಕ್ಕಳನ್ನು ದಾಖಲಿಸಿರುವ ಇನ್ನೊರ್ವ ಪಾಲಕ ಮಾತನಾಡಿ, ನನ್ನ ಮಕ್ಕಳು 3 ಮತ್ತು 4ನೇ ಕ್ಲಾಸ್‍ನಲ್ಲಿ ಓದುತ್ತಾರೆ. ಆದರೆ ಅವರಿಗೆ ಈ ವರ್ಷ ಮಕ್ಕಳಿಗೆ ದುಬಾರಿ ಶುಲ್ಕ ವಿಧಿಸಲಾಗಿದೆ. ಆನ್‍ಲೈನ್ ಕ್ಲಾಸ್ ಇದ್ದರೂ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಇದರಿಂದ ಉಪಯೋಗವಿಲ್ಲ. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಂಡು ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು. ಶಾಲೆ ಶುಲ್ಕ ಕಡಿಮೆಗೊಳಿಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಶಾಲೆ ಶುಲ್ಕ ಹೊರೆಯಿಂದ ತತ್ತರಿಸಿರುವ ಪಾಲಕರು, ಶಾಲೆ ಶುಲ್ಕದ ಹೊರೆ ಇಳಿಸಿ ಪಾಲಕರನ್ನು ಉಳಿಸಿ ಎಂದು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.
Laxmi News 24×7