ಶ್ರಾವಣ ಮಾಸದ ಕೊನೆಯ ಸೋಮವಾರ,ಯಡೂರ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ
ಚಿಕ್ಕೋಡಿ: ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆಯಲು ಭಕ್ತರ ದಂಡವೇ ಹರಿದು ಬಂದಿತ್ತು.
ದಕ್ಷಿಣದ ಕಾಶೀ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಸುಕ್ಷೇತ್ರ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ಹಾಗೂ ಭದ್ರಕಾಳಿದೇವಿಯ ದರ್ಶನವನ್ನು ಭಕ್ತರು ಸಾಲಿನಲ್ಲಿ ನಿಂತು ಶಾಂತಿಯುತವಾಗಿ ದರ್ಶನವನ್ನು
ಪಡೆದುಕೊಂಡರು.
ಕರ್ನಾಟಕ,ಮಹಾರಾಷ್ಟ್ರ,ಆಂದ್ರಪ್ರದೇಶದ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ದರ್ಶನವನ್ನು ಪಡೆದುಕೊಂಡರು.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಭಕ್ತರು ಅತ್ಯಂತ ಭಕ್ತಿಭಾವದಿಂದ ಶ್ರೀವೀರಭದ್ರೇಶ್ವರ ದೇವರಿಗೆ ಅಭಿಷೇಕವನ್ನು ಹಾಕಿದರು ಹಾಗೂ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ,
ಆರತಿ,ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.ಹಾಗೂ ಬೆಳಗಿನ ಜಾವ ಪಲ್ಲಕ್ಕಿ ಸೇವೆಯು ಕೂಡಾ ಅತ್ಯಂತ ಭಕ್ತಿದಿಂದ ಜರುಗಿತು.ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕೂಡಾ ಮಾಡಲಾಗಿದೆ.