Breaking News

ದಸರಾ ಆನೆಗಳಿಗೆ ಲಾಂಗ್ ವಾಕ್: ಗಜಪಡೆ ನೋಡಲು ಅರಮನೆ ಮುಂದೆ ಜನಸಾಗರ

Spread the love

ಮೈಸೂರು: ಇಂದಿನಿಂದ ದಸರಾ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು, ಬನ್ನಿಮಂಟಪದವರೆಗೆ ಸಾಗಿದ್ದು, ಆನೆಗಳನ್ನು ನೋಡಲು ಜನಸಾಗರವೇ ನಿಂತಿದ್ದು ವಿಶೇಷವಾಗಿತ್ತು.

ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಆನೆಗಳಾದ ಧನಂಜಯ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಮಹೇಂದ್ರ, ಕಾವೇರಿ, ಲಕ್ಷ್ಮಿ ಸೇರಿದಂತೆ ಒಂಭತ್ತು ಆನೆಗಳು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಕ್ರೀಡಾಂಗಣದವರೆಗೆ ತೆರಳಿದವು.

ಆಗಸ್ಟ್ 10ರ ಸಂಜೆ ಅರಮನೆ ಪ್ರವೇಶಿಸಿದ್ದ ಗಜಪಡೆ, ಆ.11ರಂದು ತಾಲೀಮು ಆರಂಭಿಸಿ, ಅರಮನೆಯಿಂದ 2.50 ಕಿಲೋ ಮೀಟರ್ ದೂರ ಇರುವ ಆರ್ ಎಂಸಿ ವೃತ್ತದವರೆಗೆ ಹೋಗಿ ವಾಪಸ್ ಬರುತ್ತಿದ್ದವು.

ಆದರೆ, ಇಂದಿನಿಂದ (ಆ.17) ಅರಮನೆಯಿಂದ 5ಕಿಲೋ ಮೀಟರ್​ ದೂರ ಇರುವ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಕ್ರೀಡಾಂಗಣವರೆಗೆ ಹೋಗಿ ಬಂದವು.

ಅರಮನೆಯಿಂದ ಪಂಜಿನ ಕವಾಯತು ಮೈದಾನದ ಕ್ರೀಡಾಂಗಣವರೆಗೆ ಹೋಗಿ ವಾಪಸ್ ಬರುವುದರಿಂದ 10 ಕಿ.ಮೀ. ಆಗಲಿದೆ. ಅರಮನೆಯಿಂದ ಬನ್ನಿಮಂಟಪದ ರಸ್ತೆಯ ಎರಡು ಬದಿಯಲ್ಲಿ ದಸರಾ ಮೆರವಣಿಗೆ ನೋಡಿದರೆ, ಆನೆಗಳನ್ನು ನೋಡಿದರು.


Spread the love

About Laxminews 24x7

Check Also

ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

Spread the loveಕಾರವಾರ, ಆಗಸ್ಟ್​ 16: ನಿಂತಿದ್ದ ಲಾರಿಗೆ ಕೆಎಸ್​​ಆರ್​​ಟಿಸಿ ಬಸ್ (KSRTC) ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು (death), 7 ಜನರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ