Breaking News

‘ಧರ್ಮಸ್ಥಳವನ್ನು ಬಿಜೆಪಿ ನಮ್ಮ ಸ್ವತ್ತು ಅಂದಿಲ್ಲ, ಹಿಂದೂ ಸಮಾಜದ ಸ್ವತ್ತಿಗೆ ಕೈಹಾಕುವ ಪ್ರಯತ್ನವನ್ನು ಕಾಂಗ್ರೆಸ್ ಮಾಡ್ತಿದೆ’

Spread the love

ಹುಬ್ಬಳ್ಳಿ: ಧರ್ಮಸ್ಥಳವನ್ನು ಬಿಜೆಪಿ ನಮ್ಮ ಸ್ವತ್ತು ಅಂತ ಹೇಳಿಲ್ಲ. ಕಾಂಗ್ರೆಸ್ ಸಮಸ್ತ ಹಿಂದೂ ಸಮಾಜದ ಸ್ವತ್ತಿನಲ್ಲಿ ಕೈ ಹಾಕುವ ಪ್ರಯತ್ನ ಮಾಡುತ್ತಿದೆ. ದೇಶದ ಗುಡಿ-ಗುಂಡಾರಗಳ ದುಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಇಂದು ವರೂರಿನ ನವಗೃಹತೀರ್ಥ ಕ್ಷೇತ್ರದಲ್ಲಿ ಮಾಧ್ಯಮಗಳ ಜೊತೆ ‌ಮಾತನಾಡಿದ ಅವರು, ಕುಕ್ಕರ್ ಬ್ಲಾಸ್ಟ್ ಮಾಡಿದ ಭಯೋತ್ಪಾದಕರು ಸಹೋದರರಾಗಿದ್ದಾರೆ.‌ ಮುಸ್ಲಿಂ ಲೀಗ್, ಪಿಎಫ್​​ಐ ಜೊತೆಗೆ ಸಂಪರ್ಕವಿರುವುದು ನಿಮಗೆ ಬಹಳ ಸಂತೋಷವಾಗುತ್ತದೆ. ಯಾವುನೋ‌ ಒಬ್ಬ ಅಯೋಗ್ಯ ದೂರು ಕೊಟ್ಟ ಅಂತ ಎಸ್​​ಐಟಿ ರಚನೆ ಮಾಡಿದ್ದೀರಿ. ಸೌಜನ್ಯ ಪ್ರಕರಣದ ತನಿಖೆ ಮಾಡುವುದಾಗಿ ಹೇಳಿದ್ದೀರಿ‌. ಆದ್ರೆ ಈಗ ಡಿ.ಕೆ.ಶಿವಕುಮಾರ್ ಅವರು ಷಡ್ಯಂತ್ರ ಅಂತಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ?. ಎರಡು ದಂಡೆಯ ಮೇಲೆ ಕಾಲಿಟ್ಟು ಹೋಗುವ ಕೆಲಸ ಮಾಡ್ತಾ ಇದ್ದಾರೆ. ನಿಮಗೆ ಮುಸ್ಲಿಂ ಲೀಗ್ ಜೊತೆ ಸಂಪರ್ಕ ಇದೆ. ನಾವು ನಮ್ಮ ಸ್ವತ್ತು ಅಂತ ಹೇಳಿಲ್ಲ. ತೀವ್ರ ಅತಿರೇಕಕ್ಕೆ ಹೋದಾಗ ಪ್ರತಿಕ್ರಿಯಿಸಿದ್ದೇವೆ. ಕೆಫೆ ಬ್ಲಾಸ್ಟ್ ಆದಾಗ ಭಯೋತ್ಪಾದನೆ ಕೃತ್ಯ ಅಲ್ಲ ಅಂದ್ರಿ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅತ್ಯಂತ ಅಸಭ್ಯವಾಗಿ ಮಾತಾಡಿದ್ದಾರೆ. ಇದುವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಕೇಸ್ ತಗೋತಾರೆ, ಅಲ್ಲಿ ಪೊಲೀಸರನ್ನು ಕಳುಹಿಸಿ ಅಗೆಸುತ್ತಾರೆ. ಇವರು ಎಂಥ ಅಯೋಗ್ಯರು ಅಂದ್ರೆ ಹುಡುಕಿಕೊಂಡು ಹೋದ್ರೂ ಸಿಗುವುದಿಲ್ಲ. ಇವರು ಆಳ್ವಿಕೆ ನಡೆಸಲು ಯೋಗ್ಯರಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಆರ್​​ಎಸ್ಎಸ್ ಪಾತ್ರವೇನು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಇತಿಹಾಸ ಗೊತ್ತಿಲ್ಲ. ಇದು ನಿಜವಾದ ಕಾಂಗ್ರೆಸ್ ಅಲ್ಲ. ಮುಖರ್ಜಿ ಅವರು ಬಲಿದಾನ ಮಾಡಿದ್ದಾರೆ. ಕಾಂಗ್ರೆಸ್ ಅಂದ್ರೆ ನೀವಾ? ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್​​ರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ. ಇಂದಿರಾ ಗಾಂಧಿಗಿಂತ 10 ಪಟ್ಟು ತ್ಯಾಗ ಮಾಡಿದ ಅಂಬೇಡ್ಕರ್ ಯೋಜನೆ ಎಷ್ಟಿದೆ? ಎಂದು ಟೀಕಿಸಿದರು.


Spread the love

About Laxminews 24x7

Check Also

ಸಿದ್ರಾಮಯ್ಯ ಹೌದು ಹುಲಿಯಾ ಆಗಿ ಉಳಿದಿಲ್ಲ, ʻಹೌದು ಇಲಿಯಾʼ ಆಗಿದ್ದಾರೆ: ಅಶೋಕ್‌ ಲೇವಡಿ

Spread the loveಬೆಂಗಳೂರು: ಸಿದ್ದರಾಮಯ್ಯ ʻಹೌದು ಹುಲಿಯಾʼ ಆಗಿ ಉಳಿದಿಲ್ಲ. ಅವರೀಗ ಹೌದು ಇಲಿಯಾ ಆಗಿದ್ದಾರೆ ಎಂದು ವಿಪಕ್ಷ ನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ