ಬಾಗಲಕೋಟೆ: ದೊಡ್ಡ ಮದುವೆ ಮಂಟಪದಲ್ಲಿ ನೂರಾರು ಬಂಧು ಮಿತ್ರರ ಮುಂದೆ ಸಂಭ್ರಮ ಸಡಗರದೊಂದಿಗೆ ಅದ್ಧೂರಿಯಾಗಿ ತಮ್ಮ ವಿವಾಹ ಜರುಗಬೇಕೆಂದು ಪ್ರಸ್ತುತ ಯುವಜನತೆಯ ಬಯಕೆಯಾಗಿದೆ. ಅದರಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೃಹತ್ ಮದುವೆ ಮಂಟಪದಲ್ಲಿ ವಿವಾಹವಾಗುತ್ತಿರುವ ಅನೇಕ ಜೋಡಿಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಯಾವುದೇ ಆಡಂಬರವಿಲ್ಲದೇ ಅಶ್ವತ್ಥ ಮರದ ಕೆಳಗೆ ಮದುವೆಯಾಗಿ ಗಮನ ಸೆಳೆದಿದೆ.
ಹೌದು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಹಳೆಯ ಮಹಾಕೂಟದಲ್ಲಿ ಅಶ್ವತ್ಥ ಮರದ ಕೆಳಗೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದ ಅರಣ್ಯ ಇಲಾಖೆ ಸಿಬ್ಬಂದಿ ಸಿದ್ದರಾಮ ಗೌಡ ಅವರು ಇಂಡಿ ತಾಲೂಕು ಅಂಜುಟಗಿ ಗ್ರಾಮದ ಶ್ರೇಯಾ ಹೊನಗೊಂಡ ಅವರನ್ನು ಮಂತ್ರ ಮಾಂಗಲ್ಯ ಮೂಲಕ ವರಿಸಿದ್ದಾರೆ.