ಬಂಜಾರಾ ಸಮುದಾಯ ಭವನಕ್ಕೆ ಭೂಮಿ ಒದಗಿಸಿ; ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ
ಬೆಳಗಾವಿಯಲ್ಲಿ ಹೆಚ್ಚಾಗಿರುವ ಬಂಜಾರಾ ಸಮಾಜ
ಶುಭ ಸಮಾರಂಭಗಳಿಗೆ ಸಮುದಾಯ ಭವನದ ಅವಶ್ಯಕತೆ
ಬಂಜಾರಾ ಸಮುದಾಯ ಭವನಕ್ಕೆ ಭೂಮಿ ಒದಗಿಸಿ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ
ಬಂಜಾರಾ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು 1 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಬಂಜಾರಾ ಜನ ಅಭಿವೃದ್ಧಿ ಸಮಿತಿಯ ವತಿಯಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಬೆಳಗಾವಿ ಮಹಾನಗರದಲ್ಲಿ ಬಂಜಾರ ಸಮಾಜ ರಹವಾಸಿಗಳು ಸಾವಿರಾರು ಸಂಖ್ಯೆಯಲ್ಲಿ ಇರುತ್ತಾರೆ. ಈ ಸಮಾಜ ಅತ್ಯಂತ ಕಡು ಬಡತನದ ಸಮಾಜ ಇದಾಗಿದೆ. ಈ ಹಿನ್ನೆಲೆ ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ಕಾರ್ಯಗಳನ್ನು ಮಾಡಲು 1 ಎಕರೆ ಜಾಗೆಯನ್ನು ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನಂತ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯ್ಕ್, ರಾಜ್ಯ ಮುಖಂಡ ಕೃಷ್ಣ ರಾಠೋಡ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.