
ಬೆಳಗಾವಿ: ಸಾಕು ನಾಯಿ, ಬೆಕ್ಕುಗಳ ಹುಟ್ಟುಹಬ್ಬ ಆಚರಿಸೋದನ್ನ ನೋಡಿರುತ್ತೇವೆ. ಇತ್ತೀಚೆಗೆ ಹಾವೇರಿಯಲ್ಲಿ ರೈತನೋರ್ವ ತನ್ನ ಎತ್ತಿಗೆ 25 ಕೆಜಿ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿದ್ದ. ಬೆಳಗಾವಿಯ ಕುಟುಂಬವೊಂದು ಮನೆಯಲ್ಲಿ ಸಾಕಿದ ಹುಂಜಗಳ ಹುಟ್ಟುಹಬ್ಬ ಆಚರಿಸಿದೆ.
ಮೇಘನಾ ಲಂಗರಖಂಡೆ ಹುಂಜಗಳ ಬರ್ತ್ ಡೇ ಆಚರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ. ಎರಡು ಹುಂಜಗಳಿಗೆ ಶೇರು ಮತ್ತು ವೀರು ಎಂದು ಹೆಸರಿಡಲಾಗಿದೆ. ಶೇರು ಮತ್ತು ವೀರುನ ಐದನೇ ಹುಟ್ಟುಹಬ್ಬವನ್ನ ಕುಟುಂಬಸ್ಥರು ಆಚರಿಸಿದ್ದಾರೆ.
ಶೇರು ಮತ್ತು ವೀರುವಿನ ಭಾವಚಿತ್ರವುಳ್ಳ ಫೋಟೋ ಕೇಕ್ ಮಾಡಿಸಲಾಗಿತ್ತು. ಇಬ್ಬರ ಬರ್ತ್ ಡೇಗೆ ಶುಭಕೋರುವ ದೊಡ್ಡ ಬ್ಯಾನರ್ ಸಹ ಮಾಡಿಸಲಾಗಿತ್ತು. ಶೇರು ಮತ್ತು ವೀರು ನಮ್ಮ ಮನೆಯ ಸದಸ್ಯರು ಆಗಿದ್ದಾರೆ. ನಮ್ಮ ಜೊತೆಯಲ್ಲಿಯೇ ಸದಾ ಇರುತ್ತೇವೆ. ಹಾಗಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದೇವೆ ಎಂದು ಕುಟುಂಬ ಹೇಳಿದೆ
Laxmi News 24×7